ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

200 ಕೋಟಿ ಸಾಲ ಪಡೆಯಲು ವಾ.ಕ.ರ.ಸಾ.ಸಂಸ್ಥೆಯಿಂದ ಅರ್ಜಿ ಆಹ್ವಾನ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಹಾಗೂ ಹಣಕಾಸು ಸಂಸ್ಥೆಗಳಿಂದ 200 ಕೋಟಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಿದೆ.

2020-21 ನೇ ಸಾಲಿನಲ್ಲಿ ಭವಿಷ್ಯ ನಿಧಿ ನ್ಯಾಸ ಮಂಡಳಿಯ ಬಾಕಿ ಮೊತ್ತ ಪಾವತಿಸಲು 200 ರೂ. ಕೋಟಿ ದೀರ್ಘಾವದಿ ಸಾಲವನ್ನು, 7 ವರ್ಷಗಳ ಅವಧಿಗೆ ಸಂಸ್ಥೆ ಪಡೆಯಲಿದೆ.

ಆಸಕ್ತಿ ಹೊಂದಿದ ಬ್ಯಾಂಕ್, ವಾಣಿಜ್ಯ ಹಾಗೂ ಹಣಕಾಸು ಸಂಸ್ಥೆಗಳು ಮುಚ್ಚಿದ ಲಕೋಟಿಯಲ್ಲಿ ಅರ್ಜಿಯನ್ನು ದಿನಾಂಕ 19/02/2021 ರಂದು ಮಧ್ಯಾಹ್ನ 3 ಗಂಟೆಯೊಳಗೆ ಗೋಕಲ ರಸ್ತೆಯ ಕೇಂದ್ರ ಕಚೇರಿಗೆ ಸಲ್ಲಿಸಬೇಕು‌.

ಗೋಕುಲ ರೋಡ್ ನ ವಾಯುವ್ಯ ಕರ್ನಾಟ ಕ ರಸ್ತೆ ಸಾರಿಗೆ ಸಂಸ್ಥೆಯ ಲೆಕ್ಕ ಪತ್ರ ಇಲಾಖೆ ಇವರಿಗೆ ಸಲ್ಲಿಸಬೇಕು. ಅದೇ ದಿನ 4 ಗಂಟೆಗೆ ಲಕೋಟೆಯನ್ನು ತೆರೆಯಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ www.nwksrtc.in ಹಾಗೂ ಮೊಬೈಲ್ ಸಂಖ್ಯೆ 7760991527, 7760991512 ಸಂಪರ್ಕಿಸಬಹುದು ಎಂದು ಮುಖ್ಯ ಲೆಕ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

20/01/2021 05:19 pm

Cinque Terre

44.25 K

Cinque Terre

1

ಸಂಬಂಧಿತ ಸುದ್ದಿ