ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘ ಹಾಗೂ ಹುಬ್ಬಳ್ಳಿ ಪೌಲ್ಟ್ರಿ ಡೀಲರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ, ಎರಡನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಹಾನಗರ ಸ್ವಚ್ಛತೆಯಿಂದಿರಲು ಚಿಕನ್ ವ್ಯಾಪಾರಸ್ಥರು, ಈ ವಾರ್ಷಿಕ ಕಾರ್ಯಕ್ರಮದಲ್ಲಿ ತಮ್ಮದೇ ಹಣದಲ್ಲಿ ನಾಲ್ಕು ಟಿಪ್ಪರ್ ವಾಹನಗಳನ್ನು ಖರೀದಿಸಿ ಪ್ರತಿ ಚಿಕನ್ ಅಂಗಡಿಗೆ ಹೋಗಿ ತ್ಯಾಜ್ಯವನ್ನು ಸಂಗ್ರಹ ಮಾಡಲು ಮುಂದಾಗಿದ್ದಾರೆ. ಇನ್ನು ಚಿಕನ್ ವ್ಯಾಪಾರಸ್ಥರಿಗೆ ಅಸೋಸಿಯೇಷನ್ ವತಿಯಿಂದ ಪ್ರಮಾಣ ಪತ್ರವನ್ನು ಕೂಡ ನೀಡಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಪ್ರಸಾದ್ ಅಬ್ಬಯ್ಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ, ಚಿಟಗುಪ್ಪಿ ವೈದ್ಯಾಧಿಕಾರಿ ಶ್ರೀಧರ್ ದಂಡಪ್ಪನ್ನವರ, ಎಮ್ ಡಿ ಜಾಫರ್ ಶಾದೀಕ್, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲ್ತಾಫ್ ಬೆಪಾರಿ, ಆರೀಫ್ ಬಾವಾ, ಅಬ್ದುಲ್ ರೆಹಮಾನ್ ಮುಲ್ಲಾ, ನಾಗರಾಜ ಪಟ್ಡಣ, ಎಮ್‌ಡಿ ಅಲಿ ಕಮಡೊಳ್ಳಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.
Kshetra Samachara
27/09/2022 06:09 pm