ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಎಟಿಎಂ'ನಲ್ಲಿ 10 ಸಾವಿರ ಮರೆತು ಹೋದ್ರಾ? ದಾಖಲೆ ಸಮೇತ ಬನ್ನಿ ಹಣ ಪಡೆಯಿರಿ

ಕುಂದಗೋಳ : ಪಟ್ಟಣದ ಮಾರ್ಕೇಟ್ ರೋಡ್ ಎಸ್.ಬಿ.ಐ ಬ್ಯಾಂಕ್ ಎಟಿಎಂ ಶಾಖೆಯಲ್ಲಿ ಕಳೆದ ಸೆಪ್ಟೆಂಬರ್ 22 ರಂದು ಯಾರು ಡ್ರಾ ಮಾಡಿದ 10 ಸಾವಿರ ರೂಪಾಯಿ ನಗದು ಹಣ ಅವರು ಮರಳಿದ ಬಳಿಕ ಎಟಿಎಂ ಶಾಖೆಗೆ ಬಂದ ದೇವನೂರು ಗ್ರಾಮದ ಬಸನಗೌಡ ಪಾಟೀಲ್ ಎಂಬುವವರ ಕೈ ಸೇರಿದೆ‌.

ಸಧ್ಯ ಅಂದು ಎಸ್.ಬಿ.ಐ ಶಾಖೆಯಿಂದ ಹಣ ಡ್ರಾ ಮಾಡಿ ತಾಂತ್ರಿಕ ದೋಷದ ಕಾರಣ ಹಣ ತಡವಾಗಿ ಡ್ರಾ ಆಗಿದ್ದು, ಬಳಿಕ ಬಂದ ದೇವನೂರ ಗ್ರಾಮದ ಬಸನಗೌಡ ಪಾಟೀಲ್ ಎಂಬುವವರಿಗೆ ಸಿಕ್ಕಿದೆ. ಅಂದು ಹಣ ಡ್ರಾ ಮಾಡಿ ಹಣ ಬಿಟ್ಟು ಹೋದ ವ್ಯಕ್ತಿ ಸೂಕ್ತ ಮಾಹಿತಿ ಹಾಗೂ ದಾಖಲೆ ಸಮೇತ 9731020125 ಅಥವಾ 9741999199 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹಣ ಪಡೆಯಬಹುದು.

ಈಗಾಗಲೇ ಹಣ ಕೈ ಸೇರಿದ ಬಸನಗೌಡ ಪಾಟೀಲ್ ಎಂಬುವವರು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಗೂ ಸಹಿತ ಮಾಹಿತಿ ನೀಡಿದ್ದು, ಸೂಕ್ತ ದಾಖಲೆ ಸಮೇತ ಹಣ ಕಳೆದುಕೊಂಡವರು ಪಬ್ಲಿಕ್ ನೆಕ್ಸ್ಟ್ ಮೂಲಕ ಹಣ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾಮಾಜಿಕ ಕಳಕಳಿ

Edited By : Nagesh Gaonkar
Kshetra Samachara

Kshetra Samachara

21/10/2021 04:23 pm

Cinque Terre

26.19 K

Cinque Terre

8

ಸಂಬಂಧಿತ ಸುದ್ದಿ