ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೆಲಸವನ್ನು ಕಳೆದುಕೊಂಡು ಗ್ರಾಮದಲ್ಲಿಯೇ ಉದ್ಯೋಗ ಖಾತರಿ ಯೋಜನೆ ನಂಬಿಕೊಂಡಿದ್ದ ಗ್ರಾಮಸ್ಥರಿಗೆ ಪಂಚಾಯತ್ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರ ಯಡವಟ್ಟಿನಿಂದ ಸಂಕಷ್ಟ ಎದುರಾಗಿದೆ.
ಹೌದು.. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನೀಡದೆ ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದು, ಧಾರವಾಡ ಜಿಲ್ಲೆಯ ಕಲಘಟಗಿಯ ಮುಕ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿದರಗಡ್ಡಿ ಗ್ರಾಮಸ್ಥರು ಕಳೆದ ಒಂದು ವಾರದಿಂದ ಕೆಲಸಕ್ಕಾಗಿ ಪಂಚಾಯತಿಗೆ ಅಲೆಯುತ್ತಿದ್ದಾರೆ. ಇವತ್ತು ಬನ್ನಿ, ನಾಳೆ ಬನ್ನಿ ಎನ್ನುತ್ತಿರುವ ಪಂಚಾಯತಿ ಅಧಿಕಾರಿಗಳು ನಡೆಗೆ ಬೇಸತ್ತಿರುವ ಗ್ರಾಮಸ್ಥರು ಪಿಡಿಒ ಹಾಗೂ ಅಧ್ಯಕ್ಷರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲಸ ಬೇಕಾದರೆ ಫಾರಂ ತುಂಬಿಕೊಡಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಫಾರಂ ತುಂಬಿಕೊಟ್ರು ಈಗ ಉದ್ಯೋಗ ಕೊಡ್ತಿಲ್ಲ.ಉದ್ಯೋಗ ನೀಡದೆ ಸತಾಯಿಸುತ್ತಿರುವ ಅಧಿಕಾರಿಗಳ ಅನುಮಾನಕ್ಕೆ ಕಾರಣವಾದ ನಡೆಯನ್ನು ಹಿರಿಯ ಅಧಿಕಾರಿಗಳು ಕಣ್ತೆರೆದು ನೋಡಬೇಕಾಗಿದೆ.
Kshetra Samachara
20/08/2021 03:53 pm