ಕುಂದಗೋಳ : 2021-22ನೇ ಸಾಲಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿಯ 15 ಹಣಕಾಸಿನ ಪ್ರಯೋಜನ ಪಡೆದುಕೊಂಡು ಸ್ವಂತ ಉದ್ಯೋಗ ಸೇರಿದಂತೆ ಇತರೆ ವ್ಯಯಕ್ತಿಕ ಅಭಿವೃದ್ಧಿ ಕನಸು ಕಂಡ ವಿಶೇಷ ಚೇತನರಿಗೆ ಕೊರೊನಾ ವೈರಸ್ ತಣ್ಣೀರು ಎರಚಿದೆ.
ಈ ಹಿಂದೆ ಜಿಲ್ಲಾ, ತಾಲೂಕು ಗ್ರಾಮ ಪಂಚಾಯಿತಿ 15ನೇ ಹಣಕಾಸಿನಲ್ಲಿ ವಿಶೇಷ ಚೇತನರಿಗೆ ಶೇ5% ಮೀಸಲಾತಿ ನೀಡಿ ವ್ಯಯಕ್ತಿಕ ಉದ್ಯೋಗ, ತ್ರಿಚಕ್ರ ವಾಹನ, ಸೈಕಲ್, ಹೊಲಿಗೆಯಂತ್ರ ಕೈಗೊಳ್ಳಲು ಅವಕಾಶವಿತ್ತು ಆದ್ರೇ ಸರ್ಕಾರದ ನೂತನ ಪರಿಷ್ಕರಣೆ ಕೊರೊನಾ ಕಾರಣ ಆ ಹಣವನ್ನು ಅಂಗವಿಕಲರ ಸಾಮೂಹಿಕ ಕಲ್ಯಾಣಕ್ಕೆ ವ್ಯಯಿಸುವಂತೆ ಸರ್ಕಾರ ಪ್ರತಿ ತಾಲೂಕು, ಜಿಲ್ಲಾ, ಗ್ರಾಮ ಪಂಚಾಯಿತಿಗಳಿಗೆ ಆದೇಶ ಮಾಡಿದ್ದು ಆ ಪ್ರಕಾರ ಸರ್ಕಾರಿ ಕಚೇರಿ ಶಾಲೆಗೆ ಲಿಫ್ಟ್ ಮತ್ತು ವಿಶೇಷ ಚೇತನರು ಹತ್ತಲು ರ್ರ್ಯಾಂಪ್ ನಿರ್ಮಿಸಲು ಇಲ್ಲವೆ ಒಂದೇಡೆ ಎಲ್ಲರಿಗೂ ಸಾಮೂಹಿಕ ಉದ್ಯೋಗ ನೀಡಲು ತಾಪಂ ಚಿಂತನೆ ನಡೆಸಿದೆ.
ಆದ್ರೇ, ಈ ನಿಯಮ ಎದ್ದರೆ ಕೂರಲು ಬಾರದ, ಕೂತರೆ ನಡೆಯಲು ಬಾರದ ಪ್ರತಿ ಕೆಲಸಕ್ಕೂ ಮತ್ತೋಬ್ಬರನ್ನೇ ಆಶ್ರಯಿಸುವ ಅಂಗವಿಕಲರಿಗೆ ಸಮಸ್ಯೆಯಾಗಿದ್ದು ನಮ್ಮ ಹಣ ನಮಗೆ ಕೊಡಿ ನಾನು ಕೊರೊನಾ ಕಷ್ಟದಲ್ಲಿದ್ದೇವೆ ಸಾಮೂಹಿಕ ಅಭಿವೃದ್ಧಿ ಬೇಡಾ ವೈಯಕ್ತಿಕವಾಗಿ ಬದುಕಿಗೆ ಏನಾದ್ರೂ ಮಾಡಿಕೊಳ್ಳುತ್ತೇವೆ ಪಾಲಕರ ಸಹಾಯ ಪಡೆದುಕೊಳ್ತವೆ ಎನ್ನುತ್ತಿದ್ದಾರೆ.
ಈ ವಿಷಯವಾಗಿ ನಿತ್ಯ ತಾಲೂಕಿನ 26 ಗ್ರಾಮ ಪಂಚಾಯಿತಿಗೆ ಬರೋ ವಿಶೇಷ ಚೇತನರು ಆಯಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮನವಿ ಮಾಡುತ್ತಲಿದ್ದು ಕೆಲವರು ಮಾತ್ರ ಸಾಮೂಹಿಕ ಅಭಿವೃದ್ಧಿಗೆ ಸಹಕಾರ ತೋರಿದ್ದಾರೆ.
ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ, ಪಿಡಿಓಗಳು ಸರ್ಕಾರದ ಆದೇಶ ಪಾಲಿಸಬೇಕಿದ್ದು ವಿಶೇಷ ಚೇತನರ ಕೈ ಹಿಡಿಯಲಾಗದ ಪರಿಸ್ಥಿತಿಯಲ್ಲಿ ಇಡೀ ರಾಜ್ಯಕ್ಕೆ ಈ ನಿಯಮವಿದೆ ನಾವೇನು ಮಾಡೋಣ ಅಂತಾರೆ. ಈ ಬಗ್ಗೆ ಸಂಬಂಧಪಟ್ಟ ರಾಜ್ಯ ಸರ್ಕಾರ ಜಿಲ್ಲಾಡಳಿತ ಗಮನಿಸಿ ವೈಯಕ್ತಿಕವಾಗಿ ವಿಶೇಷ ಚೇತನರ ಕಲ್ಯಾಣ ಮಾಡ್ರಿದೆ ಒಳಿತು.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
03/08/2021 12:04 pm