ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಂತೂ ಇಂತೂ ಹೋರಾಟಕ್ಕೆ ಮುಂದಾದ್ರಪ್ಪೋ ಹುಣಸಿಕುಮರಿ ಜನ

ಧಾರವಾಡ: ಧಾರವಾಡ ತಾಲೂಕಿನ ಹಾಗೂ ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹುಣಸಿಕುಮರಿ ಗ್ರಾಮದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸರಣಿ ವರದಿಗಳನ್ನು ಪ್ರಸಾರ ಮಾಡಿತ್ತು.

ವರದಿಯಿಂದ ಜಾಗೃತರಾಗಿರುವ ಹುಣಸಿಕುಮರಿ ಗ್ರಾಮದ ಗೌಳಿ ಜನ ತಮ್ಮ ಹಕ್ಕಿಗಾಗಿ ಇದೀಗ ಹೋರಾಟಕ್ಕೆ ಮುಂದಾಗಿದ್ದಾರೆ.

ತಮ್ಮ ಗ್ರಾಮಕ್ಕೆ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಧಾರವಾಡ ಜಿಲ್ಲಾ ಪಂಚಾಯ್ತಿ ಎದುರು ಸೋಮವಾರ ಧರಣಿ ನಡೆಸಿದರು. ಅಷ್ಟೇ ಅಲ್ಲ ರಸ್ತೆ ಆಗುವವರೆಗೂ ನಿರಂತರವಾಗಿ ಪ್ರತಿಭಟನೆ ನಡೆಸುವುದಾಗಿಯೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ತಾಕೀತು ಕೂಡ ಮಾಡಿದ್ದಾರೆ.

ಈ ವೇಳೆ ಸಮಜಾಯಿಷಿ ನೀಡಲು ಬಂದ ಎಂಜಿನಿಯರ್, ಈಗಾಗಲೇ ರಸ್ತೆ ಸಂಬಂಧ ಮಾತುಕತೆ ನಡೆದಿದೆ. ಶಾಸಕ ನಿಂಬಣ್ಣವರ ಈಗಾಗಲೇ ಅನುದಾನದ ಸಲುವಾಗಿ ಬೆಂಗಳೂರಿಗೆ ಹೋಗಿದ್ದಾರೆ. ಶೀಘ್ರವೇ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಇದರಿಂದ ಕಂಗಾಲಾದ ಹುಣಸಿಕುಮರಿ ಗ್ರಾಮದ ಜನ, ಸ್ವಾತಂತ್ರ್ಯ ಸಿಕ್ಕು 73 ವರ್ಷ ಆದ್ರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿಲ್ಲ. ಕೇವಲ 4 ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡುವಷ್ಟು ಅನುದಾನ ಜಿಲ್ಲಾ ಪಂಚಾಯ್ತಿಯಲ್ಲಿಲ್ಲವೇ? ಎಂದು ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇನ್ನು ಹೋರಾಟದ ನೇತೃತ್ವ ವಹಿಸಿದ್ದ ಆರ್ ಕೆಎಸ್ ಸಂಘಟನೆ ಮುಖ್ಯಸ್ಥ ಲಕ್ಷ್ಮಣ ಜಡಗಣ್ಣವರ ಪ್ರತಿಕ್ರಿಯೆ ನೀಡಿದ್ದು, ಹುಣಸಿಕುಮರಿ ಗ್ರಾಮದ ಜನರ ಸಮಸ್ಯೆ ಬಗೆಹರಿಯುವವರೆಗೂ ನಿರಂತರವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ನಂತರ ಪ್ರತಿಭಟನಾಕಾರರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಶೀಘ್ರವೇ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಿಕೊಡಬೇಕು ಎಂದರು.

Edited By :
Kshetra Samachara

Kshetra Samachara

21/09/2020 10:02 pm

Cinque Terre

64.78 K

Cinque Terre

9

ಸಂಬಂಧಿತ ಸುದ್ದಿ