ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಲ್ಪ ಅವಧಿಯಲ್ಲಿಯೇ ರೈಲ್ವೇ ಮ್ಯೂಸಿಯಂ ಮಹತ್ತರ ಸಾಧನೆ:ದಾಖಲೆಯ ದಾರಿಯಲ್ಲಿ ಎಸ್.ಡಬ್ಲ್ಯೂ.ಆರ್

ಹುಬ್ಬಳ್ಳಿ: ಉತ್ತರ ಕರ್ನಾಟಕದ ಏಕೈಕ ರೈಲ್ವೆ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ ಆರಂಭವಾಗಿ ಮೂರು ತಿಂಗಳು ಕಳೆದಿದ್ದು,ಈ ಅವಧಿಯಲ್ಲಿ ಮಹತ್ತರ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.

ಲಾಕ್ ಡೌನ್ ಸದ್ಬಳಿಕೆ ಮಾಡಿಕೊಂಡಿರುವ ಎಸ್.ಡಬ್ಲ್ಯೂ.ಆರ್ ಕಾರ್ಯ ಜನಮನ್ನಣೆ ಪಡೆದಿದೆ.ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...

ರೈಲ್ವೆ ಇಲಾಖೆಯ ಐತಿಹಾಸಿಕ ಗತವೈಭವ ಸಾರುವ ರೈಲ್ವೆ ಮ್ಯೂಸಿಯಂ 186 ವರ್ಷಗಳ ಇತಿಹಾಸ ಹೊಂದಿರುವ ರೈಲ್ವೆ ಕಾಲಕ್ರಮೇಣ ಕಂಡ ಬದಲಾವಣೆಗಳು, ಬಂದ ಹೊಸತನಗಳ ಬಗ್ಗೆ ವಸ್ತು ಸಂಗ್ರಹಾಲಯದಲ್ಲಿ ಮಾಹಿತಿ ದಾಖಲಿಸಲಾಗಿದೆ.

ರೈಲ್ವೆ ವಸ್ತುಸಂಗ್ರಹಾಲಯ ಆರಂಭವಾಗಿ ಮೂರು ತಿಂಗಳು ಕಳೆದಿದ್ದು,ಈ ಸಮಯದಲ್ಲಿಯೇ 24 ಸಾವಿರ ಜನರಿಂದ ವೀಕ್ಷಣೆ ಮಾಡಿರುವುದು ವಿಶೇಷವಾಗಿದೆ.

ಮ್ಯೂಸಿಯಂನಲ್ಲಿ ಹತ್ತು ಹಲವು ಅಪರೂಪದ ವಸ್ತುಗಳಿವೆ. ಆಗಸ್ಟ್‌ನಲ್ಲಿ 2,683 ಜನ ವೀಕ್ಷಿಸಿದ್ದರು. ಇದುವರೆಗೆ ಭೇಟಿ ನೀಡಿದವರಲ್ಲಿ ಸುಮಾರು ಐದು ಸಾವಿರ ಜನ ಮಕ್ಕಳೇ ಇರುವುದು ಮತ್ತೊಂದು ಮೆರಗನ್ನು ನೀಡಿದೆ.

ನಿತ್ಯ 140ರಿಂದ 150 ಜನ ವಸ್ತು ಸಂಗ್ರಹಾಲಯಕ್ಕೆ ಬರುತ್ತಿದ್ದು, ವಾರಾಂತ್ಯದಲ್ಲಿ ದಿನವೊಂದಕ್ಕೆ 400 ಜನ ಬರುತ್ತಿದ್ದಾರೆ. ಆಗಸ್ಟ್‌ನಲ್ಲಿ 2,683 ಜನ ಭೇಟಿ ನೀಡಿದ್ದು, 1,373 ಜನ ಸಣ್ಣ ರೈಲಿನಲ್ಲಿ ಸಂಚರಿಸಿದ್ದಾರೆ.

ನವೆಂಬರ್‌ನಲ್ಲಿ 6,628 ಜನ ಭೇಟಿ ನೀಡಿದ್ದಾರೆ. ಈ ವಸ್ತು ಸಂಗ್ರಹಾಲಯ ಮಧ್ಯಾಹ್ನ 12ರಿಂದ ಸಂಜೆ 7 ಗಂಟೆ ತನಕ, ವಾರಾಂತ್ಯದಲ್ಲಿ ಮ. 12ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.

12 ವರ್ಷದ ಒಳಗಿನ ಮಕ್ಕಳಿಗೆ 20 ಮತ್ತು ಐದು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ. ಪ್ರತಿ ಸೋಮವಾರ ರಜೆ ನಿಗದಿಪಡಿಸಿದ್ದು,ಹುಬ್ಬಳ್ಳಿ ಜನತೆಗೆ ಮಾತ್ರವಲ್ಲದೆ ಉತ್ತರ ಕರ್ನಾಟಕದ ಪ್ರವಾಸಿಗರಿಗೂ ಈ ತಾಣ ಕೈ ಬಿಸಿ ಕರೆಯುತ್ತಿದೆ.

ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್‌ ನಿರ್ದೇಶನದಲ್ಲಿಯೆ ನಿರ್ಮಾಣಗೊಂಡಿರುವ ಈ ರೈಲ್ವೆ ಮ್ಯೂಸಿಯಂ ಸಾಕಷ್ಟು ಜನಮನ್ನಣೆ ಪಡೆದಿದೆ.ಅಲ್ಲದೇ ಉತ್ತರ ಕರ್ನಾಟಕದ ಮೊದಲ ರೈಲ್ವೆ ಮ್ಯೂಸಿಯಂ ಎಂಬ ಹೆಗ್ಗಳಿಕೆ ಪಡೆದಿರುವ ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂಬುವುದು ನಮ್ಮ ಆಶಯ..

Edited By :
Kshetra Samachara

Kshetra Samachara

02/12/2020 07:05 pm

Cinque Terre

87.98 K

Cinque Terre

3

ಸಂಬಂಧಿತ ಸುದ್ದಿ