ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಿಗುರೊಡೆದ ಚಿಗರಿ ಓಟ:ನಿತ್ಯ ಸಾವಿರಾರು ಪ್ರಯಾಣಿಕರ ಓಡಾಟದಿಂದ ಆಶಾದಾಯ ಸೃಷ್ಟಿ

ಹುಬ್ಬಳ್ಳಿ: ಸಂಪೂರ್ಣ ಲಾಕ್ ಡೌನ್ ತೆರಗೊಳಿಸಿದ ಬಳಿಕ ಅವಳಿ ನಗರ ಮತ್ತು ಸಿಟಿ ಮಧ್ಯೆ ಬಸ್ ಗಳಲ್ಲಿ ಸಂಚರಿಸುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ನಗರ ಸಾರಿಗೆಯಲ್ಲಿ ಆಶಾವಾದ ಹುಟ್ಟಿಸಿದೆ.ಚಿಗರಿಯ ಸಂಚಾರ ಕೂಡ ಚಿಗುರೊಡೆದಿದೆ.

ಹೌದು..ಹುಬ್ಬಳ್ಳಿ ಮಹಾನಗರದಲ್ಲಿ ನಿತ್ಯ ಸರಾಸರಿ 65 ಸಾವಿರ ಜನರು ಹಾಗೂ ಹು-ಧಾ ಸಾರಿಗೆ ಜೀವನಾಡಿ ಬಿಆರ್ ಟಿಎಸ್ ಚಿಗರಿ ಬಸ್ ಗಳಲ್ಲಿ 19ಸಾವಿರ ಜನರು ಸಂಚರಿಸುತ್ತಿದ್ದಾರೆ. ಕೊರೊನಾ ಮುನ್ನ ಮತ್ತು ನಂತರದ ತಿಂಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದರೂ ಲಾಕ್ ಡೌನ್ ತೆರವು ಬಳಿಕ ಸಮೂಹ ಸಾರಿಗೆ ವ್ಯವಸ್ಥೆ ಸುಧಾರಣೆ ಹಾದಿಯಲ್ಲಿರುವುದು ಕಂಡು ಬರುತ್ತದೆ.

ಕೊರೊನಾ ಮುನ್ನ ಹುಬ್ಬಳ್ಳಿ ಮಹಾನಗರ, ಉಪನಗರಗಲ್ಲಿ ನಿತ್ಯ ಸರಾಸರಿ 1.25 ಲಕ್ಷ ಜನರು ಮತ್ತು ಬಿಆರ್ ಟಿಎಸ್ ಬಸ್ ಗಳಲ್ಲಿ 98 ಸಾವಿರ ಜನರು ಪ್ರಯಾಣಿಸುತ್ತಿದ್ದರು. ಕೊರೊನಾ ನಂತರದಲ್ಲಿ ಲಾಕ್ ಡೌನ್, ಮಾರ್ಗಸೂಚಿ ನಿರ್ಬಂಧ ಪರಿಣಾಮ ಸ್ಥಗಿತಗೊಂಡಿದ್ದ ಸಮೂಹ ಸಾರಿಗೆ ವ್ಯವಸ್ಥೆಯು ಮಾರ್ಗಸೂಚಿ ಹಾಗೂ ಲಾಕ್ ಡೌನ್ ಸಂಪೂರ್ಣ ತೆರವು ಬಳಿಕ ದಿನದಿಂದ ದಿನಕ್ಕೆ, ತಿಂಗಳಿಂದ ತಿಂಗಳಿಗೆ ಹಳಿಗೆ ಬರುತ್ತಿದೆ.

ಸಮೂಹ ಸಾರಿಗೆ ಬಳಕೆಯಲ್ಲಿ ಬಡವರು, ಕೆಳ ಮಧ್ಯಮ ಸಮುದಾಯವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡುಬಂದಿದೆ. ಆದರೆ. ಕೊರೊನಾ ನಂತರದಲ್ಲಿ ನೌಕರಸ್ಥರು ಮತ್ತು ಸ್ಥಿತಿವಂತರು ಸಮೂಹ ಸಾರಿಗೆಯಿಂದ ದೂರ ಉಳಿದಿರುವುದು ಪ್ರಯಾಣಿಕರ ಸಂಖ್ಯೆಯಲ್ಲಿನ ವ್ಯತ್ಯಾಸಗಳು ಮೇಲ್ನೋಟಕ್ಕೆ ದೃಢಪಡಿಸುತ್ತವೆ.

ವಿಶೇಷ ಎಂದರೆ 15 ಸಾವಿರಕ್ಕಿಂತ ಕಮ್ಮಿ ಸಂಬಳ ಪಡೆಯುವರು ಸಾರಿಗೆ ಬಸ್ ಗಳನ್ನೇ ಆಶ್ರಯಿಸಿರುವುದು ಕಂಡು ಬರುತ್ತಿದೆ ಎಂದು ನಗರ ಸಾರಿಗೆ ಬಸ್ ಡ್ರೈವರ್ ಕಂಡಕ್ಟರ್ ಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸೆ.23ರಂದು 68 ಸಾವಿರ ಜನ ಪ್ರಯಾಣಿಕರು ಸಿಟಿ ಬಸ್ ಗಳಲ್ಲಿ ಓಡಾಡಿದ್ದರೆ. ಹು-ಧಾ ಮಧ್ಯೆ ಬಿಆರ್ ಟಿಎಸ್ ಬಸ್ ನಲ್ಲಿ ಸಪ್ಟೆಂಬರ್ ತಿಂಗಳಲ್ಲಿ ನಿತ್ಯ 19,154 ಜನರು ಸಂಚರಿಸಿದ್ದಾರೆ. ಜೂನ್ ತಿಂಗಳಲ್ಲಿ 5195, ಜುಲೈ-4254, ಆಗಸ್ಟ್ ತಿಂಗಳಲ್ಲಿ 11288 ಪ್ರಯಾಣಿಕರು ಸಂಚರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

26/09/2020 06:30 pm

Cinque Terre

83.35 K

Cinque Terre

6

ಸಂಬಂಧಿತ ಸುದ್ದಿ