ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಟಿಫಿಕೇಟ್ ಪಡೆಯಲು ಬೆಳಿಗ್ಗೆ ಬಂದಿದ್ದೇವೆ ಇಷ್ಟು ಹೊತ್ತು ಆದರೂ ಬಾಗಿಲು ತೆರೆದಿಲ್ಲ: ಅಂಗವಿಕಲರ ಅಳಲು...!

ಹುಬ್ಬಳ್ಳಿ: ನಾವು ಬಾಳ ದೂರದಿಂದ ಮಳೆಯಲ್ಲಿ ಬಂದಿವಿ. ಡಾಕ್ಟರ್ ಇನ್ನೂ ಎಷ್ಟು ಹೊತ್ತಿಗೆ ಬರ್ತಾರೇ.. ಸೋಮವಾರ, ಗುರುವಾರ ಅಷ್ಟೇ ಇಲ್ಲಿ ಸರ್ಟಿಫಿಕೇಟ್ ಕೊಡ್ತಾರೆ. 12 ಅಂದರೆ ಕ್ಲೋಸ್ ಆಗುತ್ತೇ ಇಷ್ಟು ಹೊತ್ತು ಆದರೂ ಇನ್ನೂ ಯಾರು ಬಂದಿಲ್ಲ. ಇದೆಲ್ಲಾ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿರುವ ಅಂಗವಿಕಲ ಪ್ರಮಾಣ ಪತ್ರ ನೀಡುವ ಕೊಠಡಿ ಮುಂದೆ ಸಾಲಿನಲ್ಲಿ ನಿಂತಿರುವ ಜನರ ಮಾತು...

ಹೌದು.. ಬೆಳ್ಳಂಬೆಳಿಗ್ಗೆ ಬಂದು ಕಿಮ್ಸ್ ಆವರಣದಲ್ಲಿ ಸಾಲುಗಟ್ಟಿನಿಂತಿರುವ ಜನರು ಅಂಗವೈಕಲ್ಯದ ಪ್ರಮಾಣ ಪತ್ರ ಪಡೆಯಲು ಬಂದಿದ್ದಾರೆ. ಆದರೆ 9 ಗಂಟೆಗೆ ಆರಂಭವಾಗಬೇಕಿದ್ದ ಕೊಠಡಿ 10-30 ಆದರೂ ಸ್ಟಾರ್ಟ್ ಆಗಿರಲಿಲ್ಲ. ಅಲ್ಲದೇ 12 ಗಂಟೆಗೆ ಬಾಗಿಲು ಹಾಕಲಾಗುತ್ತದೆ. ಇನ್ನೂ ವಾರದಲ್ಲಿ ಎರಡು ದಿನ ಮಾತ್ರ ಪ್ರಮಾಣ ಪತ್ರ ನೀಡಲಾಗುತ್ತದೆ. ಆದರೂ ಕೂಡ ಸಿಬ್ಬಂದಿ ನಿಷ್ಕಾಳಜಿಯಿಂದ ಸಾರ್ವಜನಿಕರು ಮಾತ್ರ ಮಳೆಯಲ್ಲಿಯೇ ಸಾಲಿನಲ್ಲಿ ನಿಂತು ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳು ಉದ್ಬವಿಸುತ್ತಲೇ ಇವೆ. ಅಂಗವೈಕಲ್ಯ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಹಳ್ಳಿಗಳಿಂದ ಸುರಿಯುವ ಮಳೆಯಲ್ಲಿಯೇ ಬಂದರೂ ಕೂಡ ಸಿಬ್ಬಂದಿ ಮಾತ್ರ ಪ್ರಮಾಣ ಪತ್ರ ವಿತರಣೆ ಕೊಠಡಿ ಬಾಗಿಲು ಮಾತ್ರ ತೆಗೆದಿಲ್ಲ.

ಕೇವಲ ಮೂರು ಗಂಟೆ ಮಾತ್ರ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ‌. ಅದರಲ್ಲಿಯೇ 1-30 ಗಂಟೆ ಕಾಲ ತಡವಾಗಿ ಬಂದು ಜನರಿಗೆ ಪ್ರಮಾಣ ಪತ್ರ ನೀಡಲು ಮುಂದಾಗುತ್ತಾರೆ. ಇದರಿಂದ ಎಷ್ಟೋ ಜನರು ನಿರಾಶೆಯಿಂದ ಮರಳುವಂತಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಜರುಗಿಸಿ ಅವಧಿ ವಿಸ್ತರಣೆ ಮಾಡಬೇಕಿದೆ.

Edited By : Shivu K
Kshetra Samachara

Kshetra Samachara

18/11/2021 12:19 pm

Cinque Terre

54.83 K

Cinque Terre

7

ಸಂಬಂಧಿತ ಸುದ್ದಿ