ಕುಂದಗೋಳ : ನಿಮ್ಗೆ ಗೊತ್ತಿದೆಯಲ್ಲಾ ಈ ಜಗತ್ತು ಕೊರೊನಾ ಹಾವಳಿಯಿಂದ. ಇನ್ನೂ ದೂರವಾಗಿಲ್ಲ ಆಗಲೇ ಜಾನುವಾರುಗಳಿಗೆ ಲಿಂಪಿಸ್ಕೀನ್ ರೋಗ ಆವರಿಸಿ ಜನರನ್ನು ಮತ್ತಷ್ಟು ಕಷ್ಟಕ್ಕೆ ಇಡುಮಾಡಿದ್ದು ಎಲ್ಲರೂ ಈಗ ಪಶು ಆಸ್ಪತ್ರೆ ಬಾಗಿಲು ತಟ್ಟೋದೆ ಹೆಚ್ಚಾಗಿದೆ.
ಹೀಗೆ ನಿಮ್ಮ ಜಾನುವಾರುಗಳ ಜೊತೆ ಲಿಂಪಿಸ್ಕೀನ್ ಸೇರಿದಂತೆ ಇತರ ರೋಗಕ್ಕೆ ಔಷಧಿ ಕೆಳೋಕೆ ಕುಂದಗೋಳ ಪಶು ಆಸ್ಪತ್ರೆಗೆ ಬಂದ್ರೆ ಅಲ್ಲಿನ ಕಲುಷಿತ ವಾತಾವರಣವೇ ನಿಮ್ಮ ಜಾನುವಾರಿಗೆ ಮತ್ತೊಂದು ಹೊಸ ರೋಗ ತೊಂದೊಡ್ಡಿ ಬೀಡತ್ತೆ ಅಷ್ಟರ ಮಟ್ಟಿಗೆ ಅನೈರ್ಮಲ್ಯ ತಾಂಡವಾಡುತ್ತಿದೆ.
ಜಾನುವಾರುಗಳಿಗೆ ಬಳಸಿದ ಬಿಸಾಡಿದ ಇಂಜೇಕ್ಷನ್, ಸಿರೀಂಜ್ ಜಾಷಧಿಗಳ ಗ್ಲಾಸ್ ಬಾಟಲಿ ಆವರಣದಲ್ಲೇ ಬಿದ್ದಿದ್ದು ಪಶು ಆಸ್ಪತ್ರೆ ಆವರಣದಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ನಿರ್ವಹಣೆಯಿಲ್ಲದೆ ತಲೆ ಎತ್ತಿದ ಕಸ ಕಾಣುತ್ತೆ ಜಾನುವಾರು ಕಟ್ಟುವ ಜಾಗದಲ್ಲಿ ಮಳೆ ಪರಿಣಾಮ ನೀರು ನಿಂತು ಕೊಳಚೆ ಸೇರಿದ್ದು ಕಾಲಿಟ್ಟಲೆಲ್ಲಾ ರಾಡಿಯೆ ಇದೆ.
ದನದ ಚಿಕಿತ್ಸೆ ಕೊಟ್ಟಿಗೆಗಳು ಎರೆಡು ಉಪಕ್ಕಿದ್ದರೆ ಮತ್ತೊಂದು ಕಸ ಬೆಳೆದ ಕಾರಣ ಉಪಯೋಗಕ್ಕಿಲ್ಲ ಈ ಸಮಸ್ಯೆ ಒಂದೆಡೆಯಾದ್ರೆ, ಇಡೀ ಕುಂದಗೋಳ ತಾಲೂಕಿನಲ್ಲಿ ಬರೋಬ್ಬರಿ 19 ಪಶು ಆಸ್ಪತ್ರೆಗಳಿದ್ದು ಭರ್ತಿ 76 ಸಿಬ್ಬಂದಿಗಳ ಪೈಕಿ ಕೇವಲ 26 ಸಿಬ್ಬಂದಿಗಳು ಮಾತ್ರ ಕಾರ್ಯ ಮಾಡುತ್ತಿದ್ದು ಮಿಕ್ಕ 50 ಜನ ವೈದ್ಯಾಧಿಕಾರಿಗಳು, ಸೇರಿದಂತೆ ಇತರ ಸಿಬ್ಬಂದಿಗಳು ಇಲ್ಲದೆ ಇರುವ ಕಾರಣ ಲಿಂಪಿಸ್ಕೀನ್ ರೋಗವಷ್ಟೇ ಅಲ್ಲ ಬೇರೆ ಕಾಯಿಲೆಗಳಿಗೂ ಜಾನುವಾರಗಳ ಮಾಲೀಕರು ಭಯಪಡ ಬೇಕಾದ ಅನಿವಾರ್ಯತೆ ಹೆಚ್ಚಿದೆ.
Kshetra Samachara
24/09/2020 04:10 pm