ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವ್ಯವಸ್ಥೆ ಆಗರ ಕಿಮ್ಸ್ ಆವರಣದ ವೇದಾಂತ ಆಸ್ಪತ್ರೆ: ನಿರ್ವಹಣೆ ಭಾಗ್ಯವಿಲ್ಲದ ವೇದಾಂತ...!

ಹುಬ್ಬಳ್ಳಿ: ಜನರ ಉಪಯೋಗಕ್ಕೆ ಕೋಟ್ಯಾಂತರ ರೂಪಾಯಿ ಹಣವನ್ನು ವ್ಯಯಿಸಿ ಹಲವಾರು ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತದೆ. ಆದರೆ ‌ನಿರ್ವಹಣೆಯ ಕೊರತೆಯಿಂದ ಅದೆಷ್ಟೋ ಯೋಜನೆಯ ಲಾಭ ಜನರಿಗೆ ಸಿಗುವುದೇ ಇಲ್ಲ. ಅಂತಹುದೇ ಒಂದು ಘಟನೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಕಿಲ್ಲರ್ ವೈರಸ್ ಚಿಕಿತ್ಸೆಗೆ ವಾಣಿಜ್ಯನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ವೇದಾಂತ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ವೇದಾಂತ ಕಂಪನಿಯವರು ನೂರು ಬೆಡ್ ಆಸ್ಪತ್ರೆಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿ ಕಿಮ್ಸ್ ಗೆ ಹಸ್ತಾಂತರ ಮಾಡಲಾಗಿದೆ. ಆದರೆ ಕಿಮ್ಸ್ ಹಾಗೂ ಜಿಲ್ಲಾಡಳಿತದ ನಿಷ್ಕಾಳಜಿಯಿಂದ ವೇದಾಂತದ್ದೇ ದೊಡ್ಡ ರಾದ್ದಾಂತವಾಗಿದೆ. ಎಲ್ಲೆಂದರಲ್ಲಿ ಕಸ, ಜಾಡು ಹಾಗೂ ಧೂಳು ತುಂಬಿರುವ ಬೆಡ್ ಇವೆಲ್ಲವೂ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ನೂರು ಬೆಡ್ ನಲ್ಲಿ 80 ಬೆಡ್ ಆಕ್ಸಿಜನ್ ಬೆಡ್, 10 ವೆಂಟಿಲೇಟರ್ ಬೆಡ್ ಹಾಗೂ 10 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಎರಡನೇ ಅಲೆಯ ತೀವ್ರತೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಡ್ ಕೊರತೆಯನ್ನು ನೀಗಿಸುವ ಸದುದ್ದೇಶದಿಂದ ಈ ಒಂದು ಕೋವಿಡ್ ಹಾಸ್ಪಿಟಲ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಮೂರನೇ ಅಲೆಯು ಜನರಲ್ಲಿ ಆತಂಕವನ್ನು ಹುಟ್ಟು ಹಾಕಿದ್ದು, ಕಿಮ್ಸ್ ಮಾತ್ರ ವೇದಾಂತ ಆಸ್ಪತ್ರೆ ನಿರ್ವಹಣೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ದಾನಿಗಳು ಕೊಟ್ಟಿರುವ ಆಸ್ಪತ್ರೆಯ ನಿರ್ವಹಣೆ ಬಗ್ಗೆ ಕಿಮ್ಸ್ ಹಾಗೂ ಜಿಲ್ಲಾಡಳಿತ ನಿಷ್ಕಾಳಜಿ ತೋರಿಸಿತ್ತಿರುವುದಾದರೂ ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ‌ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಜನರಿಗೆ ಆರೋಗ್ಯ ಸೇವೆ ನೀಡಬೇಕಿದ್ದ ವೇದಾಂತ ಆಸ್ಪತ್ರೆ ಕೇವಲ ಸಚಿವರ ಲೋಕಾರ್ಪಣೆ ಹಾಗೂ ಪ್ರಚಾರಕ್ಕೆ ಹಾಕಿದಂತ ವೇದಿಕೆ ಆದಂತೆ ಆಗಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

Edited By : Manjunath H D
Kshetra Samachara

Kshetra Samachara

11/01/2022 05:33 pm

Cinque Terre

117.75 K

Cinque Terre

4

ಸಂಬಂಧಿತ ಸುದ್ದಿ