ಹುಬ್ಬಳ್ಳಿ: ಬರೋಬ್ಬರಿ ಒಂಬತ್ತು ತಿಂಗಳಿಂದ ಕೊರೋನಾ ರೋಗಿಗಳ ಚಿಕಿತ್ಸಾ ಕೇಂದ್ರವಾಗಿ (ಕೋವಿಡ್ ಕೇರ್ ಸೆಂಟರ್) ಕಾರ್ಯನಿರ್ವಹಿಸುತ್ತಿರುವ ನಗರದಕಿಮ್ಸ್‌ನ ಸೂಪರ್ ಸ್ಪೇಶಾಲಿಟಿ(ಪಿಎಂಎಸ್‌ಎಸ್‌ವೈ) ಆಸ್ಪತ್ರೆಯಲ್ಲಿ ಹೊರ ರೋಗಿಗಳ ತಪಾಸಣೆ ವಿಭಾಗ (ಓಪಿಡಿ) ಅರಂಭಿಸಲು ಕಿಮ್ಸ್ ವೈದ್ಯರು ಚಿಂತನೆ ನಡೆಸಿದ್ದಾರೆ.
ಹೌದು..ಈ ನಿಟ್ಟಿನಲ್ಲಿ ಸಿದ್ಧತಾ ಕಾರ್ಯಗಳು ಆಸ್ಪತ್ರೆಯಲ್ಲಿ ಪ್ರಾರಂಭಗೊಂಡಿವೆ.
ಆದರೆ, ಕೋವಿಡ್ ಎರಡನೇ ಹಂತದ ಅಲೆ ಶುರುವಾದರೆ ಕೋವಿಡ್ ರೋಗಿಗಳ ಆರೈಕೆ ಕೇಂದ್ರವಾಗಿ ಮುಂದುವರಿದರೂ ಅಚ್ಚರಿ ಇಲ್ಲ. ಈ ಸಾಧ್ಯತೆಗಳು ತೀರ ಕಮ್ಮಿ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುವ ಕಿಮ್ಸ್ ವೈದ್ಯರು, ಮೊದಲಿನಷ್ಟು ನಾಗಾಲೋಟ ಇರುವುದಿಲ್ಲ. ಹಾಗಾಗಿ ಓಪಿಡಿಗೆ ಸಮಸ್ಯೆಯಾಗುವುದಿಲ್ಲ ಎಂದು ಹೇಳುತ್ತಾರೆ.
ಸದ್ಯ ನ್ಯೂರಾಲಜಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟ್ರಾಲಜಿ, ಪ್ಲಾಸ್ಟಿಕ್ ಸರ್ಜರಿ, ಯೂರೋಲಜಿ ವಿಭಾಗದ ಓಪಿಡಿ ಆರಂಭಿಸುವ ಬಗ್ಗೆ ನಿರ್ದೇಶಕ ಡಾ. ರಾಮಲಿಂಗಪ ಅಂಟರತಾನಿ ನೇತೃತ್ವದಲ್ಲಿ ಹಿರಿಯ ವೈದ್ಯರು ಚರ್ಚಿಸಿದ್ದು, ಬಹುತೇಕ ವೈದ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಹಳೆ ಬಿಲ್ಡಿಂಗ್‌ನ ಓಪಿಡಿ ವಿಭಾಗದಲ್ಲಿ ಹೊರ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ಎರಡು ವಾರಗಳಲ್ಲಿ ನಿತ್ಯ ಸರಾಸರಿ 1500 ರೋಗಿಗಳು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗಲೇ ಒತ್ತಡ ತಗ್ಗಿಸಲು ಸೂಪರ್ ಸ್ಪೇಶಾಲಿಟಿ ಕಟ್ಟಡಕ್ಕೆ ವರ್ಗಾಯಿಸುವ ಸಲುವಾಗಿ ಓಪಿಡಿ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್‌ಗಿಂತಲೂ ಮೊದಲು 1800-2000 ರೋಗಿಗಳು ತಪಾಷಣೆಗೆ ಆಗಮಿಸುತ್ತಿದ್ದರು.ಈ ಕುರಿತು ತೀರ್ಮಾನಿಸಿದ ಬಳಿಕ ಪಿಎಂಎಸ್‌ಎಸ್‌ವೈ ಕಟ್ಟಡದಲ್ಲಿ ವಾರ್ಡ್‌ಗಳನ್ನು ಶುಚಿಗೊಳಿಸಲು ಹಾಗೂ ಪೀಠೋಪಕರಣಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಇನ್ನೂ ವಾರ್ಡ್‌ಗಳನ್ನು ಶುಚಿಗೊಳಿಸಿ, ಸಂಪೂರ್ಣ ಸ್ಯಾನಿಟೈಜೇಶನ್‌ಗೊಳಪಡಿಸುವ ಕೆಲಸ ಬಾಕಿ ಇದೆ.
ಕೋವಿಡ್ ಕೇರ್ ಸೆಂಟರ್ ಸೂಪರ್‌ಸ್ಪೇಶಾಲಿಟಿ ಕಟ್ಟಡದಲ್ಲಿ ಓಪಿಡಿ ಆರಂಭಿಸುವ ಕಿಮ್ಸ್ ನಿರ್‘ಾರಕ್ಕೆ ಜಿಲ್ಲಾಕಾರಿ ನಿತೇಶ್ ಪಾಟೀಲ್ ಬ್ರೇಕ್ ಹಾಕಿದ್ದಾರೆ. ಕೊರೊನಾ ಕೇಸ್ ಕಮ್ಮಿ ಆಗುತ್ತಿದ್ದು, ಓಪಿಡಿ ಆರಂಭಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅನುಮತಿ ಕೊಡಿ ಎಂದು ಕಿಮ್ಸ್ ನಿರ್ದೇಶಕರ ನೇತೃತ್ವದ ತಂಡ ಇತ್ತೀಚೆಗೆ ಡಿಸಿಯವರಲ್ಲಿ ಮನವಿ ಮಾಡಿದೆ. ಈ ವೇಳೆ ಡಿಸಿಯವರು ಯಾಕೆ ಇಷ್ಟೊಂದು ಆತುರವೇಕೆ..? ಕೊರೊನಾ ಎರಡನೇ ಹಂತದ ಅಲೆ ಹಾಗೂ ದಸರಾ, ದೀಪಾವಳಿ ಹಬ್ಬದಿಂದ ಕೊರೊನಾ ಹರಡುವಿಕೆ ಸಾಧ್ಯತೆಗಳಿವೆ. ಹಾಗಾಗಿ ಈಗಲೇ ಓಪಿಡಿ ಆರಂಭಿಸೋದು ಬೇಡ ಎಂದು ಸಲಹೆ ನೀಡಿದ್ದಾರೆ ಎಂದು ಕಿಮ್ಸ್ ಮೂಲಗಳು ತಿಳಿಸಿವೆ.
Kshetra Samachara
20/11/2020 09:24 pm