ಕುಂದಗೋಳ: ತಾಲೂಕಿನ ಸಂಶಿ ಹೋಬಳಿ ಬೃಹತ್ ಸಂಖ್ಯೆಯಲ್ಲಿ ರೈತರನ್ನು ಹೊಂದಿದೆ. ಪ್ರತಿ ರೈತರ ಮನೆಯಲ್ಲಿನ ಜಾನುವಾರುಗಳಿಗೆ ಉಂಟಾಗುವ ರೋಗಗಳಿಗೆ ವೈದ್ಯರ ಕೊರತೆಯಿಂದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲಾ ಎಂದು ಆಕ್ರೋಶಗೊಂಡ ರೈತರು ಸಂಶಿ ಪಶು ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಸಂಶಿಯ ಬೆಳೆ ರಕ್ಷಕ ಸಂಘಟನೆ ರೈತರು ಜಾನುವಾರು ಔಷಧಿ ವಿತರಣೆ ಹಾಗೂ ಚಿಕಿತ್ಸೆ ವಿಷಯದಲ್ಲಿ ವೈದ್ಯರ ಕೊರತೆಯಿಂದ ಸಮರ್ಪಕ ಸೇವೆ ಸಿಗುತ್ತಿಲ್ಲ ಎಂದು ಆರೋಪಿಸಿ ರೈತ ಮುಖಂಡ ಪರಮೇಶ್ವರ್ ನಾಯ್ಕರ್ ನೇತೃತ್ವದಲ್ಲಿ ಪಶು ಆಸ್ಪತ್ರೆಗೆ ಬೀಗ ಹಾಕಿ ವ್ಯವಸ್ಥೆ ವಿರುದ್ಧ ಕಿಡಿ ಕಾರಿದರು.
ಸಂಶಿ ಸರ್ಕಾರಿ ಪಶು ಆಸ್ಪತ್ರೆ ವೈದ್ಯರ ಹುದ್ದೆ ಖಾಲಿ ಇದ್ದು, ಔಷಧಿ ವಿತರಣೆ ಸಹ ಸರಿಯಾಗಿಲ್ಲಾ ಎಂದು ಆರೋಪ ಮಾಡಿದರು.
ಸಂಶಿಯಲ್ಲಿ ಬೀಗ ಜಡಿದು ರೈತರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವೈದ್ಯಾಧಿಕಾರಿ ಡಾ. ಬಿ.ಬಿ ಅವಾರಿ ಔಷಧೋಪಚಾರದಲ್ಲಿ ಸಮಸ್ಯೆ ಇಲ್ಲಾ. ವೈದ್ಯರ ಕೊರತೆ ಶೀಘ್ರ ಸರಿ ಹೋಗಲಿದೆ ಎಂದರು.
Kshetra Samachara
14/09/2022 07:42 pm