ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಸಾರಿ ಪ್ಲಾಟ್ ನಿವಾಸ, ನರಕದ ಸಹವಾಸ ಜನಪ್ರತಿನಿಧಿಗಳೇ.!

ಕುಂದಗೋಳ: ಮಳೆರಾಯ ಸುರಿದರೆ ಯಾರಿಗೆ ಖುಷಿ ಆಗಲ್ಲ ಹೇಳಿ ಎಲ್ಲರಿಗೂ ಸಂತಸವೇ. ಆದರೆ ಅದೇ ವರುಣ ಇಲ್ಲೊಂದು ವಾರ್ಡ್‌ಗೆ ಸುರಿದ್ರೇ ಇಲ್ಲಿನ ನಿವಾಸಿಗಳ ಪರಿಸ್ಥಿತಿ ಅತಂತ್ರ.

ಹೌದು! ಇದು ಯಾವುದೋ ಗುಡ್ಡಗಾಡು ನಿವಾಸಿಗಳ ಕಥೆಯಲ್ಲಾ, ಬದಲಾಗಿ ಕುಂದಗೋಳ ಪಟ್ಟಣದ ಮಸಾರಿ ಪ್ಲಾಟ್ ನಿವಾಸಿಗಳ ವ್ಯಥೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ರೈಲ್ವೆ ಬ್ರಿಡ್ಜ್ ಕಾಮಗಾರಿ ಮುಗಿಯದ ಕಾರಣ ಈ ವಾರ್ಡ್‌ಗೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ, ಇನ್ನೂ ಚರಂಡಿ ವ್ಯವಸ್ಥೆ ದೂರದ ಮಾತೇ ಸರಿ. ಎಲ್ಲದಕ್ಕಿಂತ ಮುಖ್ಯವಾಗಿ ಸ್ವಚ್ಛತೆ, ನೈರ್ಮಲ್ಯ ಮಾಯವಾಗಿ ಜನ ನಿತ್ಯ ಅವ್ಯವಸ್ಥೆ ಕೂಪದಲ್ಲಿ ಬಳಲಿ ಬೆಂಡಾಗಿ ಕಾಯಿಲೆಗೆ ತುತ್ತಾಗುವ ಎಲ್ಲಾ ಅವ್ಯವಸ್ಥೆ ಇಲ್ಲಿದೆ.

ಇನ್ನೂ ಇಲ್ಲಿನ ನಿವಾಸಿಗಳು ಶಾಲಾ ಮಕ್ಕಳು ರಾಡಿ, ನೀರಲ್ಲೇ ನಿತ್ಯ ಓಡಾಟ ನಡೆಸಿ ಕಾಯಿಲೆಗೆ ತುತ್ತಾದ್ರೆ ವೈದ್ಯರು ಈ ಕೊಂಪೆಗೆ ಬರುವುದು ದೂರದ ಮಾತೇ, ಇನ್ನೂ ಸ್ಥಳೀಯ ಆಸ್ಪತ್ರೆ ಸೇರಬೇಕೆಂದ್ರು ಎರಡು ಕಿಲೋ ಮೀಟರ್ ಪಾದಯಾತ್ರೆ ಅನಿವಾರ್ಯ.

ಕಳೆದ ಹಲವಾರು ವರ್ಷಗಳಿಂದ ಮೂಲ ಸೌಕರ್ಯಗಳೇ ಕೊರತೆ ನಡುವೆ ಬಳಲುವ ಇಲ್ಲಿನ ಜನರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳ ದರ್ಶನ. ಒಟ್ಟಾರೆ ಇಲ್ಲಿನ ಮಹಿಳೆಯರಿಗೆ ಬಯಲು ಶೌಚಾಲಯ ಖಾಯಂ ಆಗಿದ್ದು, ಇಲ್ಲೋಂದು ಸಾರ್ವಜನಿಕರ ಶೌಚಾಲಯ ಇಲ್ಲದೆ ಇರುವುದು ವಿಪರ್ಯಾಸವೇ ಸರಿ ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಗಮನಿಸಲಿ ಎಂಬುದು ಜನಾಭಿಪ್ರಾಯ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Nagesh Gaonkar
Kshetra Samachara

Kshetra Samachara

05/07/2022 04:11 pm

Cinque Terre

57.95 K

Cinque Terre

0

ಸಂಬಂಧಿತ ಸುದ್ದಿ