ಹುಬ್ಬಳ್ಳಿ: ಶಿರಗುಪ್ಪಿ ರಸ್ತೆ ಸಮಸ್ಯೆಗೆ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಒಂದೇ ದಿನದಲ್ಲಿ ಮುಕ್ತಿ ಸಿಕ್ಕಿದ್ದು, ಜನರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ್ದ ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್ ಇದಾಗಿದೆ.
ಹೌದು... ಶಿರಗುಪ್ಪಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ದೂರದ ಕೆರೆಯಿಂದ ಮನೆಗೆ ನೀರು ತರಲು ಸರಿಯಾದ ರಸ್ತೆ ಇಲ್ಲದ್ದರಿಂದ ಡೇಂಜರಸ್ ಸರ್ಕಸ್ ಮಾಡುತ್ತಾ ಬರಬೇಕಾಗಿತ್ತು. ಈ ಅಪಾಯಕಾರಿ ಚಿತ್ರಣದ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವೀಡಿಯೊ ಸಹಿತ ವರದಿ ಪ್ರಸಾರ ಮಾಡಿ ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ ಆಡಳಿತ, ತಕ್ಷಣ ರಸ್ತೆಯನ್ನು ದುರಸ್ತಿಗೊಳಿಸಲು ಮುಂದಾಗಿದೆ.
ಪಬ್ಲಿಕ್ ನೆಕ್ಸ್ಟ್ ನ ಸಮಾಜಮುಖಿ ಕೈಂಕರ್ಯ ಕ್ಕೆ ಜನರು ಕೃತಜ್ಞತೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾಗಿರುವ ಪಬ್ಲಿಕ್ ನೆಕ್ಸ್ಟ್ ವರದಿಗೆ ಶೀಘ್ರವಾಗಿ ಸ್ಪಂದಿಸಿ, ಕಾರ್ಯಪ್ರವೃತ್ತರಾದ ಜನಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಅಭಿನಂದನೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/07/2022 01:44 pm