ನವಲಗುಂದ: ನವಲಗುಂದ ಪಟ್ಟಣದ ಬಸವೇಶ್ವರ ನಗರದ 18ನೇ ವಾರ್ಡ್ ನಲ್ಲಿ ಶನಿವಾರ ಬೀಸಿದ ಜೋರುಗಾಳಿಗೆ ಎರಡು ಕಂಬಗಳು ಧರೆಗುರುಳಿದ್ದವು. ಇಂದು ನವಲಗುಂದ ಹೆಸ್ಕಾಂ ಅಧಿಕಾರಿಗಳು ಅಲ್ಲಿ ನೂತನ ಕಂಬಗಳನ್ನು ಅಳವಡಿಸಿದ್ದಾರೆ.
ನಿನ್ನೆ ಬೀಸಿದ ಗಾಳಿಗೆ ಕಂಬ ಮೊದಲು ಮರದ ಮೇಲೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದು, ಅಧಿಕಾರಿಗಳು ಮರವೇ ಕಂಬದ ಮೇಲೆ ಬಿದ್ದಿತ್ತು ಎಂದರು.
ಘಟನೆಯಲ್ಲಿ ಎರಡು ಕಂಬಗಳು ನೆಲಕ್ಕಚ್ಚಿದ್ದವು. ಸೆಕ್ಷನ್ ಆಫೀಸರ್ ಬಾವಿಕಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಂಬಗಳ ಅಳವಡಿಕೆಗೆ ಮುಂದಾಗಿದ್ದರು.
Kshetra Samachara
12/06/2022 08:28 pm