ನಗರ ಪಟ್ಟಣಗನ್ನೆಲ್ಲಾ ಸ್ವಚ್ಛವಾಗಿಡಿ, ರೋಗಾಣುಗಳಿಂದ ದೂರವಿರಿ ಎಂದು ಜನ ಜಾಗೃತಿ ಮೂಡಿಸುವುದು ಪಟ್ಟಣ ಪಂಚಾಯತಿ ಧ್ಯೇಯ ವಾಕ್ಯ. ಆದರೆ ಪಟ್ಟಣ ಪಂಚಾಯಿತಿಯ ಪಕ್ಕದಲ್ಲೇ ರಸ್ತೆ ಇಲ್ಲದೆ ಮೂತ್ರ ವಿಸರ್ಜನೆಯ ಕೆಟ್ಟ ವಾಸನೆ ಇದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನೆ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ನೀವಿಲ್ಲಿ ನೋಡುತ್ತಿರುವುದು ಅಳ್ನಾವರ ಪಟ್ಟಣ ಪಂಚಾಯಿತಿ ಪಕ್ಕದಲ್ಲೇ ಇರುವ ವಿಹಂಗಮ ನೋಟ.
ಅಳ್ನಾವರ ಪಟ್ಟಣ ಪಂಚಾಯಿತಿ ಪಕ್ಕದಲ್ಲಿ ಓಡಾಡಲು ರಸ್ತೆ ಇಲ್ಲದೆ ಕೆಸರು ಗದ್ದೆ ಎಂತಾಗಿದೆ. ಕಸ ಕಂಟಿಗಳಿಂದ ತುಂಬಿ ಹೋಗಿದೆ. ಶೌಚಾಲಯ ಇದ್ದು ಇಲ್ಲ ದಂತಾಗಿ ಕೆಟ್ಟ ವಾಸನೆ ಬರತೊಡಗಿದೆ. ಇದು ಪ್ರತಿದಿನ ರೈತರು ತಮಗೆ ಬೇಕಾದ ಪಹಣಿ ಪತ್ರಗಳನ್ನು, ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಪಡೆಯುವ ಕಟ್ಟಡಕ್ಕೆ ಹೋಗುವ ಸ್ಥಳ. ರಸ್ತೆ ಇಲ್ಲದೆ, ಒಳ ಚರಂಡಿ ವ್ಯವಸ್ಥೆ ಇಲ್ಲದೆ, ನೀರೆಲ್ಲಾ ನಿಂತು ಓಡಾಡಲು ರಸ್ತೆ ಇಲ್ಲದಂತೆ ಆಗಿದೆ.
ಇಷ್ಟಾದರೂ ಪಟ್ಟಣ ಪಂಚಾಯಿತಿ ಅವರು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಗಬ್ಬುನಾಥ ಹೊಡೆಯುತ್ತಿದ್ದರೂ ಅಧಿಕಾರಿಗಳು, ಜನ ಪ್ರತಿನಿಧಿಗಳು ನೋಡಿಯು ನೋಡದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಆದಷ್ಟು ಬೇಗ ಒಳಚರಂಡಿ ವ್ಯವಸ್ಥೆ ಮಾಡಿ ಓಡಾಡಲು ರಸ್ತೆ ವ್ಯವಸ್ಥೆ ಮಾಡಬೇಕು ಎಂಬುದು ರೈತಾಪಿವರ್ಗ ಹಾಗೂ ಸಾರ್ವಜನಿಕರ ಅಳಲಾಗಿದೆ.
- ಮಹಾಂತೇಶ ಪಠಾನಿ, ಪಬ್ಲಿಕ್ ನೆಕ್ಷ್ಟ್ ಅಳ್ನಾವರ.
Kshetra Samachara
20/07/2022 03:36 pm