ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದು, ಪಾಲಿಕೆ ಆವರಣದಲ್ಲಿ ಕ್ರೀಡಾಪಟುಗಳು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಸ್ಮಾರ್ಟ್ ಸಿಟಿ ಯೋಜನೆಯಡಿ, ನೆಹರೂ ಮೈದಾನದ ಕಾಮಗಾರಿ ನಡೆಯುತ್ತಿದೆ. ಆದ್ರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಅದು ಯಾವಾಗ ಮುಗಿಯುತ್ತದೆ ಅನ್ನೋದೇ ಕ್ರೀಡಾಪಟುಗಳಿಗೆ ಚಿಂತೆಯಾಗಿದೆ. ಅಷ್ಟೇ ಅಲ್ಲದೇ ನೆಹರೂ ಮೈದಾನದಲ್ಲಿ ಫುಟ್‌ಬಾಲ್ ಗ್ರೌಂಡ್ ಮಾಡುತ್ತಿರುವುದರಿಂದ ಕ್ರಿಕೆಟ್ ಆಡಲು ತೊಂದರೆ ಆಗುತ್ತಿದೆ. ಕೂಡಲೇ ಫುಟ್‌ಬಾಲ್ ಗ್ರೌಂಡ್‌ನ್ನು ಬೇರೆ ಕಡೆಯಲ್ಲಿ ಮಾಡಬೇಕು. ಮತ್ತು ನೆಹರೂ ಮೈದಾನದ ಕಾಮಗಾರಿ ಆದಷ್ಟು ಬೇಗ ಮುಗಿಸಬೇಕೆಂದು ಒತ್ತಾಯಿಸಿ ಪಾಲಿಕೆ ಆವರಣದ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.
Kshetra Samachara
29/07/2022 02:27 pm