ಹುಬ್ಬಳ್ಳಿಯ ಕಿರ್ಲೋಸ್ಕರ್ ಕಂಪೆನಿ ಜಾಗದ ವಿಚಾರದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ. ಈಗಾಗಲೇ ಆ ಜಾಗವನ್ನು ರೆಸಿಡೆನ್ಸಿಯಲ್ ಮಾಡಲು ಎನ್ಎ ಮಾಡಿಸಲಾಗಿದೆ ಎಂಬ ತಪ್ಪು ಸಂದೇಶ ಹೋಗಿದೆ ಇದು ಸುಳ್ಳು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಆ ಜಾಗ ಕಿರ್ಲೋಸ್ಕರ್ ಕಂಪೆನಿಗೆ 1996ರಲ್ಲೇ ಗ್ರ್ಯಾಂಟ್ ಆಗಿದೆ. ಇನ್ನೂ ಆ ಜಾಗ ಕಂಪೆನಿಯ ಹೆಸರಲ್ಲೇ ಇದೆ. ಬೇರೆಯವರಿಗಾಗಿ ಆ ಜಾಗವನ್ನು ನಾವು ಎನ್ಎ ಮಾಡಿಕೊಟ್ಟಿದ್ದೇವೆ ಎಂದು ತಪ್ಪು ಸಂದೇಶ ಹೋಗಿದೆ. ಆ ರೀತಿಯ ಯಾವುದೇ ಬೆಳವಣಿಗೆಯಾಗಿಲ್ಲ ಎಂದಿದ್ದಾರೆ.
ಕೆಲವರು ಆ ಜಾಗವನ್ನು ರೆಸಿಡೆನ್ಸಿಯಲ್ ಮಾಡಲು ನಮ್ಮ ಬಳಿ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ನಾವು ಪರಿಶೀಲಿಸಬೇಕು. ಅದರ ಕುರಿತು ದಾಖಲೆ ತೆಗೆಸಬೇಕು. ಕಾನೂನು ಪ್ರಕಾರ ಏನು ಮಾಡಲು ಬರುತ್ತದೆಯೋ ನೋಡಬೇಕು. ಆದರೆ, ಆ ಜಾಗವನ್ನು ಎನ್ಎ ಮಾಡಲು ಕೊಟ್ಟಿದ್ದಾರೆ ಎಂಬುದು ಸುಳ್ಳು ಎಂದರು.
ಹಳೇ ಜಿಲ್ಲಾಧಿಕಾರಿ ಇದ್ದಾಗ ಅದರದ್ದೊಂದು ಕೋರ್ಟ್ ಮ್ಯಾಟರ್ ಇತ್ತು. ಕಿರ್ಲೋಸ್ಕರ್ ಕಂಪೆನಿಗೆ ನೋಟಿಸ್ ಕೊಟ್ಟಿತ್ತು. ನೋಟಿಸ್ ಪ್ರಕಾರ ಹಿಯರಿಂಗ್ ಮಾಡುವುದಿತ್ತು. ಹಳೇ ಜಿಲ್ಲಾಧಿಕಾರಿಗಳು ಹಿಯರಿಂಗ್ ಮಾಡಿ ಅದನ್ನು ಡಿಸಾಲ್ವ್ ಮಾಡಿದ್ದಾರೆ. ಈ ಬಗ್ಗೆ ಸರ್ಕಾರದಿಂದಲೂ ಇದುವರೆಗೂ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ. ನಿರ್ದೇಶನ ಬಂದ ನಂತರ ತಡಮಾಡದೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/07/2022 06:05 pm