ಬಾಲ್ಯದಲ್ಲೇ ಮಕ್ಕಳಿಗೆ ತೊದಲು ನುಡಿ ತಿದ್ದಿ ಅ ಆ ಇ ಈ ಕಲಿಕೆ ಹೇಳಬೇಕಾದ ಅಂಗನವಾಡಿ ಕಟ್ಟಡವೊಂದು ಮಳೆ ಬಂದ್ರೇ ಸಾಕು ಧೋ ಎಂದು ಸೋರುವ ಹಂತಕ್ಕೆ ತಲುಪಿದೆ.
ಹೌದು ! ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಅಂಗನವಾಡಿ ಕೇಂದ್ರ ನಂಬರ್ 15 ರಲ್ಲಿ ಮಳೆ ಬಂದರೆ ಅಂಗನವಾಡಿ ಮಾಳಿಗೆ ಸೋರುತ್ತದೆ.
ಇದೇ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸಾಮಗ್ರಿ ಹಾಗೂ ಪಿಠೋಪಕರಣಗಳನ್ನು ಬದಿಗಿಟ್ಟು ಕೂರುವ ಪ್ರಸಂಗ ಏರ್ಪಟ್ಟಿದೆ.
ಕಳೆದ ಹಲವು ವರ್ಷಗಳಿಂದ ಇಲ್ಲಿ ಇದೇ ಅವ್ಯವಸ್ಥೆ ಇದ್ದು ಗ್ರಾಮಸ್ಥರು ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಪರಿಹಾರ ಮಾತ್ರ ಸಿಕ್ಕಿಲ್ಲ.
ಮಳೆಗೆ ಸೋರುತ್ತಿರುವ ಅಂಗನವಾಡಿ ಬಗ್ಗೆ ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿಗಳು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಿದೆ.
Kshetra Samachara
08/07/2022 01:34 pm