ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಕಾಮಗಾರಿ ಆಮೆಗತಿಗೆ ಕಾರಣ ಕೊಟ್ಟ ಪಾಲಿಕೆ ಆಯುಕ್ತರು

ವಾಣಿಜ್ಯ ನಗರಿ ಹುಬ್ಬಳ್ಳಿ ಸ್ಮಾರ್ಟ್ ಆಗುತ್ತಿದ್ದು ಸುಮಾರು ಮೂರ್ನಾಲ್ಕು ವರ್ಷಗಳು ಕಳೆದಿವೆ. ಅದಲ್ಲದೆ ಈಗಾಗಲೇ ಕೆಲವೆಡೆ ಕಾಮಗಾರಿಯು ಕೂಡ ಪೂರ್ಣಗೊಂಡಿದೆ. ಇನ್ನೂ ಕೆಲವೆಡೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದಕ್ಕೆಲ್ಲ ಕಾರಣ ಏನು ಎಂಬುದು ಇಲ್ಲಿದೆ ನೋಡಿ.

ಹೌದು. ಅತಿ ಸುಸಜ್ಜಿತವಾಗಿ, ಮತ್ತೆ ಮತ್ತೆ ತೊಂದರೆ ಆಗಬಾರದೆಂದು ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ನಿಧಾನವಾಗಿ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ಮಾಡುತ್ತಿರುವಾಗ ಮೊದಲಿಗೆ ಡ್ರೈನೇಜ್ ಅನ್ನು ಅಳವಡಿಸಿ ನಂತರ ರಸ್ತೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕುಡಿಯುವ ನೀರಿನ ಪೈಪ್, ಭೂಗತ ಕೇಬಲ್ ಅಳವಡಿಸುತ್ತಿದ್ದಾರೆ. ಆದ ಕಾರಣ ಕೆಲವು ಕಾಮಗಾರಿಗಳು ತಡವಾಗುತ್ತಿವೆ. ಮಳೆ ಹೆಚ್ಚಾಗುವ ಮುಂಚೆ ವಾಣಿಜ್ಯ ನಗರಿ ಆದಷ್ಟು ಬೇಗ ಸ್ಮಾರ್ಟ್ ಆಗಬೇಕು ಇಲ್ಲದಿದ್ದರೆ ಬಹಳ ತೊಂದರೆ ಆಗುತ್ತದೆ ಎಂದು ಜನಸಾಮಾನ್ಯರ ಸಂಕಟವಾಗಿದೆ. ಯಾಕೆ ಕಾಮಗಾರಿಗಳು ತಡವಾಗುತ್ತವೆ ಎಂಬುದನ್ನು ಮಹಾನಗರ ಪಾಲಿಕೆ ಆಯುಕ್ತರು ಏನು ಹೇಳುತ್ತಾರೆ ಕೇಳಿ.

ಒಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಆದಷ್ಟು ಬೇಗನೆ ಮುಗಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು....

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By :
Kshetra Samachara

Kshetra Samachara

21/06/2022 01:54 pm

Cinque Terre

24.12 K

Cinque Terre

4

ಸಂಬಂಧಿತ ಸುದ್ದಿ