ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಟ್ಟಣ ಪಂಚಾಯಿತಿ ಬಜೆಟ್, ಹೆಚ್ಚಿದ ಆದಾಯದ ನಿರೀಕ್ಷೆ

ಪಟ್ಟಣ ಪಂಚಾಯಿತಿಯ 2022-23ರ 11,88,44000 ಆಯವ್ಯಯವನ್ನು ಪ.ಪಂ ಅಧ್ಯಕ್ಷ ಪ್ರಕಾಶ ಕೊಕಾಟೆ ಓದಿ 7.65 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ಹೌದು ! ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಬಜೆಟ್ ಸಭೆ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪ್ರಕಾಶ್ ಪಟ್ಟಣದ ಅಭಿವೃದ್ಧಿ ನಾನು ಸಿದ್ಧ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಧನ್ಯವಾದ ಎಂದು ಸಭಿಕರಿಗೆ ಕೃತಜ್ಞತೆ ಅರ್ಪಿಸಿದ ಬಳಿಕ ಬಜೆಟ್ ಮಂಡಿಸಿದ ಅವರು ಸರ್ಕಾರದ ಮುಕ್ತ ಅನುದಾನ 22 ಲಕ್ಷ, 77 ಲಕ್ಷ 15ನೇ ಹಣಕಾಸು ಯೋಜನೆ, ವಿದ್ಯುತಶಕ್ತಿ ಅನುದಾನ 42 ಲಕ್ಷ, ವಿಶೇಷ ಅನುದಾನ 400 ಲಕ್ಷ, ನಗರೋತ್ಥಾನ ಅನುದಾನ 425 ಲಕ್ಷ ನಿರೀಕ್ಷೆ ಇಡಲಾಗಿದೆ.

ಅದೇ ರೀತಿ ಆಸ್ತಿ ತೇರಿಗೆಯಿಂದ 30 ಲಕ್ಷ, ನೀರು ಸರಬರಾಜು ಕರ 35 ಲಕ್ಷ, ವಾಣಿಜ್ಯ ಸಂಕೀರ್ಣ ಬಾಡಿಗೆ 5.28 ಲಕ್ಷ, ಮಾರುಕಟ್ಟೆ ಶುಲ್ಕ 5.25 ಲಕ್ಷ, ಎಸ್.ಡಬ್ಲ್ಯು.ಎಮ್ 4.50 ಲಕ್ಷ, ಇತರ ಮೂಲದ 16.03 ಲಕ್ಷ ಹೀಗೆ ಒಟ್ಟು 101.40 ಲಕ್ಷ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಸರ್ವ ಸದಸ್ಯರ ಒಪ್ಪಿಗೆ ಮೂಲಕ ಬಜೆಟನ್ನು ಒಪ್ಪಿ ಅನುಮೋದನೆ ನೀಡಲಾಯಿತು. ಪ.ಪಂ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಮಾತನಾಡಿ ಪಟ್ಟಣದಲ್ಲಿ ಎಲ್ಲ ವಾರ್ಡಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಕೆ ಅವಶ್ಯವಿದ್ದು ಅದರ ಬಗ್ಗೆ ಗಣನೆ ತೆಗೆದುಕೊಳ್ಳಲು ಹೇಳಿದರು. ಅದಕ್ಕೆ ಪ.ಪಂ ಮುಖ್ಯಾಧಿಕಾರಿ ನಾರಾಯಣ ಡೊಂಬರ ಸರಿ ಅವರ ಬಗ್ಗೆ ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಕಾರ್ಯ ಮಾಡುತ್ತೇವೆ ಎಂದರು.

ಈ ವೇಳೆ ಸದಸ್ಯ ಬಸವರಾಜ ತಳವಾರ ಶೌಚಾಲಯ ನಿರ್ಮಾಣದಲ್ಲಿ ಫಲಾನುಭವಿಗಳ ಅನೇಕ ಸರಿಯಾಗಿ ಸಮಸ್ಯೆಗಳಿದ್ದು ಹಣ ಪಾವತಿಯಾಗಿರುವುದಿಲ್ಲ ಹಾಗೂ ಸಾರ್ವಜನಿಕ ಶೌಚಾಲಯದ ಅವಶ್ಯಕತೆ ಬಗ್ಗೆ ಮಾತನಾಡಿ ಎಲ್ಲರ ಗಮನಕ್ಕೆ ತಂದರು. ಈ ವಿಷಯದ ವಿಸ್ತಾರ ಮಾಹಿತಿ ನೀಡುವುದಾಗಿ ಮುಖ್ಯಾಧಿಕಾರಿ ಸದಸ್ಯರಿಗೆ ತಿಳಿಸಿದರು.

Edited By :
Kshetra Samachara

Kshetra Samachara

29/03/2022 03:11 pm

Cinque Terre

16.57 K

Cinque Terre

0

ಸಂಬಂಧಿತ ಸುದ್ದಿ