ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರಚಾರಕ್ಕಾಗಿ ಯೋಗ ದಿನಾಚರಣೆ ಮಾಡುತ್ತಿಲ್ಲ: ಸಚಿವೆ ಶಶಿಕಲಾ ಜೊಲ್ಲೆ

ಹುಬ್ಬಳ್ಳಿ: ವಿಶ್ವ ಯೋಗ ದಿನದ ಆಚರಣೆಯಲ್ಲಿ ಯಾವುದೇ ಪ್ರಚಾರದ ಉದ್ದೇಶವಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಯೋಗ ದಿನವನ್ನು ಎಂಟು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ‌. ಆದರೆ ಈ ಬಗ್ಗೆ ಇನ್ನೂ ಜಾಗೃತಿ ಮೂಡಬೇಕಾಗಿದೆ. ತಳಮಟ್ಟದವರೆಗೆ ಯೋಗ ಮುಟ್ಟಬೇಕೆಂದರೆ ಪ್ರಚಾರ ಅವಶ್ಯ. ಕೇವಲ ವಿಶ್ವ ಯೋಗ ದಿನದಂದು ಮಾತ್ರ ಯೋಗವನ್ನು ಆಚರಣೆ ಮಾಡದೇ, ಪ್ರತಿನಿತ್ಯ ಯೋಗ ಮಾಡುವಂತದ್ದು ಆಗಬೇಕು.‌ ಇದರಲ್ಲಿ ಪ್ರಚಾರದ ಉದ್ದೇಶ ಇಲ್ಲ ಎಂದು ಹೇಳುವ ಮೂಲಕ ಯೋಗವನ್ನು ನರೇಂದ್ರ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟರು.

ಅಂತರಾಷ್ಟ್ರೀಯ ಯೋಗದಿನವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ಮಾಡಲಾಗಿದೆ. ಭಾರತ ಋಷಿಮುನಿಗಳ ಕೊಡುಗೆ. ನಮ್ಮ ದೇಶದ ಯೋಗವನ್ನು ಇತ್ತೀಚಿನ ದಿನಗಳಲ್ಲಿ ಹೊರದೇಶದವರು ಸ್ವೀಕಾರ ಮಾಡಿ ಅವರು ಮಾಡುವಂತಹ ಯೋಗವನ್ನು ನಾವು ನೋಡುತ್ತಾ ಇದ್ದೆವು‌. ನಮ್ಮ ದೇಶದಲ್ಲಿ ಎಲ್ಲೋ ಒಂದು ಕಡೆಗೆ ಯೋಗಾಭ್ಯಾಸ ಕಡಿಮೆ ಆಗುತ್ತಾ ಇದೆ‌ ಎಂಬ ಭಾವನೆ ಮೂಡುತ್ತಿತ್ತು. ಆದರೆ ನರೇಂದ್ರ ಮೋದಿ ಅವರು 2015 ರಲ್ಲಿ ವಿಶ್ವ ಯೋಗವನ್ನಾಗಿ ಮಾಡುವಲ್ಲಿ ಯಶಸ್ವಿಯಾದ್ರು. ಇಂದು ಎಲ್ಲೆಡೆ ಏಕಕಾಲದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.

ಜೂನ್ 21 ವಿಶೇಷವಾದ ದಿನವಾಗಿದೆ. ಇಂದು ಹಗಲು ದೊಡ್ಡದಿದೆ. ತಜ್ಞರು ಹೇಳಿರುವಂತೆ ಇಂದು ಯೋಗದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದ ಸಚಿವೆ ಶಶಿಕಲಾ ಜೊಲ್ಲೇ ಸಾವಿರಾರು ಜನರು ಒಂದೆಡೆ ಸೇರಿ ಯೋಗ ಮಾಡುವುದರಿಂದ ಕೊರೋನಾ ಉಲ್ಬಣವಾಗುವುದಿಲ್ಲವೇ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವು ಯೋಗಾಸನವನ್ನು ಸಾಮಾಜಿಕ ಅಂತರ ಇಟ್ಟುಕೊಂಡೇ ಮಾಡಿದ್ದೇವೆ. ವಿರೋಧ ಪಕ್ಷದವರು ಆರೋಪ ಮಾಡುವುದು ಸಾಮಾನ್ಯ. ನಾವು ಯೋಗಾಸನವನ್ನು ಶಿಸ್ತಿನಿಂದ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.

Edited By : Somashekar
Kshetra Samachara

Kshetra Samachara

21/06/2022 05:51 pm

Cinque Terre

20.23 K

Cinque Terre

2

ಸಂಬಂಧಿತ ಸುದ್ದಿ