ಕುಂದಗೋಳ : ಕಳೆದ ಒಂದು ವಾರದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಕುಂದಗೋಳ ಪಟ್ಟಣದ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಇದೀಗ ಬೆಳಕು ಕಂಡಿದೆ. ಹೌದು ನಿನ್ನೆಯಷ್ಟೇ ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು. ವಿದ್ಯುತ್ ಸಂಪರ್ಕ ಇರದ ಕಾರಣ ಸ್ನಾನಕ್ಕೆ, ಶೌಚಾಲಯಕ್ಕೆ, ಕುಡಿಯಲು ಸಹ ನೀರು ಇಲ್ಲದೇ ಪರದಾಡುತ್ತಿದ್ದ ಅಲ್ಪಸಂಖ್ಯಾತರ ಹಾಸ್ಟೆಲ್ ವಿದ್ಯಾರ್ಥಿಗಳ ಪಾಡನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿತ್ತು.
ಈ ವರದಿ ಪ್ರಕಟಗೊಂಡ ಮರುದಿನವೇ ಹಾಸ್ಟೆಲ್ ಮಕ್ಕಳಿಗೆ ವಿದ್ಯುತ್ ಸಂಪರ್ಕ, ಶುದ್ಧ ಕುಡಿಯುವ ನೀರು, ಸ್ನಾನಕ್ಕೆ ನೀರಿನ ಸೌಲಭ್ಯದ ಜೊತೆ ಮುಖ್ಯವಾಗಿ ಪರೀಕ್ಷಾ ಸಂದರ್ಭ ಅಭ್ಯಾಸ ಮಾಡಲು ವಿದ್ಯುತ್ ಸೌಲಭ್ಯ ಸಿಕ್ಕಿದೆ.
ಪಬ್ಲಿಕ್ ನೆಕ್ಸ್ಟ್ ವರದಿ ಪರಿಣಾಮ ಮೂಲ ಸೌಕರ್ಯಗಳ ಬೆಳಕು ಕಂಡ ವಿದ್ಯಾರ್ಥಿಗಳು ಸಂತೋಷದಿಂದ ಅಭ್ಯಾಸದಲ್ಲಿ ತೊಡಗಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
06/04/2022 01:49 pm