ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಾರ್ಚ್ 26ಕ್ಕೆ ಟೈಕಾನ್ ಉದ್ಯಮಶೀಲತಾ ಶೃಂಗಸಭೆ

ಹುಬ್ಬಳ್ಳಿ: ಟೈಕಾನ್ ಹುಬ್ಬಳ್ಳಿಯ ವತಿಯಿಂದ ಮಹಿಳಾ ಕಾನ್ಕ್ಲೇವ್, ಸ್ಟಾರ್ಟ್ ಅಪ್ ಶೃಂಗಸಭೆ ಮತ್ತು ಟೈಕಾನ್ -2022 ವಾರ್ಷಿಕೋತ್ಸವವನ್ನು ಇದೇ 26ರಂದು ಉಣಕಲ್ ಹತ್ತಿರ ನವೀನ್ ಹೊಟೇಲ್ ನಲ್ಲಿ ಆಯೋಜಿಸಲಾಗಿದೆ ಎಂದು ಟೈಕಾನ್ ಅಧ್ಯಕ್ಷ ವಿಜಯ ಸೈಗಲ್ ಹೇಳಿದರು.

ನಗರದಲ್ಲಿಂದು ಟೈಕಾನ್ ಶೃಂಗಸಭೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿ ಇಂಡಸ್ ಎಂಟರ್ ಪ್ರಿನರ್ಸ್ ಟೈ ಹುಬ್ಬಳ್ಳಿಯು ದೊಡ್ಡಮಟ್ಟದ ಉದ್ಯಮಶೀಲತಾ ಶೃಂಗ ಸಭೆಯನ್ನು ಆಯೋಜಿಸಿದೆ. ಎಜುಕೇಷನ್, ನೆಟ್ವರ್ಕಿಂಗ್, ಮೆಟಾರಿಂಗ್ ಮತ್ತು ಫಂಡಿಂಗ್ ಧ್ಯೇಯ ವಾಕ್ಯದ ಆದ್ಯತೆ ಮೇಲೆ ಶೃಂಗಸಭೆಯನ್ನು ಆಯೋಜಿಸಲಾಗಿದೆ ಎಂದರು.

ಇನ್ನು ಅಂದು ನಡೆಯುವ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಮುರಗೇಶ ನಿರಾಣಿ ಆಗಮಿಸಲಿದ್ದಾರೆ ಎಂದು ತಿಳಿಸಿದ್ರು.

Edited By :
Kshetra Samachara

Kshetra Samachara

12/03/2022 02:01 pm

Cinque Terre

29.78 K

Cinque Terre

0

ಸಂಬಂಧಿತ ಸುದ್ದಿ