ಲಕ್ಷ್ಮೇಶ್ವರ: ಶಾಲೆಯ ಆವರಣದೊಳಗೆ ಮಳೆ ನೀರು ಭರ್ತಿಯಾಗಿದೆ. ನಿಂತ ನೀರು ಎಲ್ಲಿಯೂ ಹೋಗದೇ ಪರಿಸರ ಹದಗೆಟ್ಟು ದುರ್ವಾಸನೆ ಬರುತ್ತಿದೆ.
ಧಾರಾಕಾರ ಮಳೆಗೆ ಶಾಲಾ ಆವರಣದಲ್ಲಿ ನೀರು ನಿಂತುಕೊಂಡಿದ್ದು ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ .
ಇನ್ನು ಶಾಲೆಯ ಆವರಣದಲ್ಲಿ ಮಳೆಯ ನೀರು ಹರಿಯುತ್ತಿರುವುದರಿಂದ ವಿದ್ಯಾರ್ಥಿಗಳು ನರಕ ಯಾತನೆ ಅನುಭವಿಸುವಂತಾಗಿದೆ. ಮಕ್ಕಳು ಇಷ್ಟೇಲ್ಲಾ ತೊಂದರೆ ಅನುಭವಿಸುತ್ತಿದ್ದರು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತುಕೊಂಡಿರುವುದು ನಿಜಕ್ಕೂ ವಿಪರ್ಯಾಸ.
ಈಗಷ್ಟೇ ಶಾಲೆ ಪ್ರಾರಂಭವಾಗಿದೆ ನಿಂತ ನೀರಿನಿಂದ ದುರ್ವಾಸನೆ ಬರುತ್ತಿದೆ. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ. ಆದಷ್ಟು ಬೇಗ ಈ ಆವರಣದಲ್ಲಿ ನೀರು ನಿಲ್ಲದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕಾಗಿದೆ.
Kshetra Samachara
16/10/2021 04:43 pm