ಕುಂದಗೋಳ: ಗ್ರಾಮೀಣ ಭಾಗದ ಜನರಿಗೆ ಜ್ಞಾನದ ಜೊತೆ ಉಪಯುಕ್ತ ಮಾಹಿತಿ ನೀಡಬೇಕಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯಗಳು ಇದೆಯೋ ಇಲ್ಲವೋ ಎಂಬ ಸ್ಥಿತಿ ಹಳ್ಳಿಗಳಲ್ಲಿ ನಿರ್ಮಾಣವಾಗಿದೆ.
ಕುಂದಗೋಳ ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯಗಳು ಅಗತ್ಯ ಸೌಲಭ್ಯ ಇರದೆ ಓದುಗರಿಂದ ದೂರವಾಗಿವೆ ಮುಖ್ಯವಾಗಿ 22 ಗ್ರಾಮ ಪಂಚಾಯಿತಿ ಗ್ರಂಥಾಲಯದ ಕಟ್ಟಡಗಳಲ್ಲಿ 6 ಪಂಚಾಯಿತಿ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡವಿಲ್ಲ, ತಾಲೂಕು ಪಂಚಾಯಿತಿ ನೀಡಿದ ಮಾಹಿತಿ ಪ್ರಕಾರ 22 ಗ್ರಂಥಾಲಯಗಳಲ್ಲಿ ಯಾವೊಂದು ಗ್ರಂಥಾಲಯ ಸ್ಪರ್ಧಾತ್ಮಕ ಜಗತ್ತಿಗೆ ಮುಖ್ಯವಾದ ಅಗತ್ಯ ಪುಸ್ತಕಗಳ ಸೌಲಭ್ಯ ಹೊಂದಿಲ್ಲ, ಎರಡಕ್ಕಿಂತ ಹೆಚ್ಚಿನ ದಿನ ಪತ್ರಿಕೆ ತರಿಸೋದಿಲ್ಲ, ಈಗಾಗಲೇ ಗ್ರಂಥಾಲಯಕ್ಕೆ ಬರೋ ದಿನಪತ್ರಿಕೆಗಳ ಮೊತ್ತವನ್ನು ಆಯಾ ಪಂಚಾಯಿತಿ ಅಡಳಿತ ನೀಡಿಲ್ಲ ಎಂಬ ಅಂಶ ತಿಳಿದು ಬಂದಿದೆ.
ಇನ್ನೂ ಕುಂದಗೋಳ ತಾಲೂಕಿನ ಸಂಶಿ, ಯರೇಬೂದಿಹಾಳ, ಕಳಸ, ಹಿರೇಗುಂಜಳ, ಗುಡಗೇರಿ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳನ್ನು ಡಿಜಿಟಲೀಕರಣ ಗ್ರಂಥಾಲಯವಾಗಿ ಮಾರ್ಪಡಿಸುವ ಆದೇಶವಿದ್ದರೂ ಸಹ ಆ ಕಾರ್ಯ ಆರಂಭವಾಗಿಲ್ಲ ಮುಖ್ಯವಾಗಿ ಗ್ರಂಥಾಲಯಗಳಿಗೆ ಇರಬೇಕಾದ ಗಣಕಯಂತ್ರದ ಸೌಲಭ್ಯವೇ ಇಲ್ಲವಾಗಿದ್ದು ಗ್ರಾಮೀಣ ಮಟ್ಟದ ಶೈಕ್ಷಣಿಕ ಪ್ರಗತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮರೆತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಕೇಳಿದಾಗ ಅವರು ಕೊಟ್ಟ ಉತ್ತರ ಹೀಗಿದೆ.
ಒಟ್ಟಾರೆ 26 ಗ್ರಾಮ ಪಂಚಾಯಿತಿಗಳಲ್ಲಿ 22 ಪಂಚಾಯಿತಿ ಮಾತ್ರ ಗ್ರಂಥಾಲಯ ಹೊಂದಿದ್ದು 4 ಪಂಚಾಯಿತಿಗೆ ಗ್ರಂಥಾಲಯದ ಅವಶ್ಯಕತೆ ಇದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕಿದೆ.
ಶ್ರೀಧರ ಪೂಜಾರ
ಪಬ್ಲಿಕ್ ನೆಕ್ಸ್ಟ್ ಕುಂದಗೋಳ.
Kshetra Samachara
23/09/2021 09:53 am