ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸಲು ಅನುಮತಿಗಾಗಿ ಹೋರಾಟ: ಪಾಲಿಕೆಗೆ ಮುತ್ತಿಗೆ ಹಾಕಿ ಆಕ್ರೋಶ

ಹುಬ್ಬಳ್ಳಿ: ಕಳೆದ ಒಂದು ತಿಂಗಳಿನಿಂದ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸಲು ಅನುಮತಿಗಾಗಿ, ಸಂಘಟನೆಗಳು, ಉತ್ಸವ ಮಂಡಳಿ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದ್ರೆ ಪಾಲಿಕೆ ಮಾತ್ರ ಹಾರಿಕೆ ಉತ್ತರ ನೀಡಿ ಕೈ ತೊಳೆದುಕೊಳ್ಳಿತ್ತಿದೆ....

ಹೌದು… ಒಂದು ಕಡೆ ಗಣೇಶೋತ್ಸವ ಮಂಡಳಿ, ಶ್ರೀರಾಮ ಸೇನೆ, ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಈ ವರ್ಷ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಣೆ ಮಾಡಬೇಕೆಂದು ಪಣತೊಟ್ಟಿವೆ.. ಇತ್ತ ಪಾಲಿಕೆ ಮಾತ್ರ ಆಚರಣೆಗೆ ಪರ್ಮಿಶನ್ ಕೊಡದೇ ಆಟವಾಡಿಸುತ್ತಿದೆ. ಇದ್ರಿಂದ ರೊಚ್ಚಿಗೆದ್ದ ಗಜಾನನ ಮಂಡಳಿ ಮತ್ತು ಕನ್ನಡಪರ ಸಂಘಟನೆಗಳು, ಇಂದು ನಗರದ ದುರ್ಗದಬೈಲ್ ನಿಂದ ಪಾಲಿಕೆ ವರೆಗೆ, ರ‍್ಯಾಲಿ ನಡೆಸಿ, ಸಾರ್ವಜನಿಕ ಒಪ್ಪಿಗೆ ಸಹಿ ಪಡೆದುಕೊಂಡು ಅನುಮತಿಗಾಗಿ ಪಾಲಿಕೆಗೆ ಮುತ್ತಿಗೆ ಹಾಕಿದ್ದಾರೆ. ಪಾಲಿಕೆ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸಲು ಅನುಮತಿಯನ್ನು ನೀಡದಿದ್ದರೆ ಇದೆ ಆಗಸ್ಟ್ 25 ರಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆಂದು ಎಚ್ಚರಿಕೆ ನೀಡಿದರು..

ಇನ್ನು ಗಜಾನನ ಮಹಾ ಮಂಡಳಿ ಸದಸ್ಯರು, ಈದ್ಗಾ ಮೈದಾನದಲ್ಲಿ ವಿಘ್ನೇಶ್ವರನ ಉತ್ಸವ ಮಾಡಲು ಅನುಮತಿಗಾಗಿ ಇಲಾಖೆಗಳಿಗೆ ಹೇಗೆಲ್ಲಾ ಅಲೆದಾಡಿದ್ದಾರೆ ಎಂಬುದರ ಅಣಕು ಪ್ರದರ್ಶನ ಕೂಡ ಮಾಡಿದರು. ಅಷ್ಟೇ ಅಲ್ಲದೆ ಸಾರ್ವಜನಿಕರ ಸಹಿ ಸಂಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿದ್ದಾರೆ. ಸ್ಥಳದ ವಸ್ತುಸ್ಥಿತಿ ನೋಡಿ ಮತ್ತು ಜನಪ್ರತಿನಿಧಿಗಳ ಜೊತೆ ಮಾತನಾಡಿ ಪರಿಶೀಲನೆ ಮಾಡಲಾಗುತ್ತದೆಂದು ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶೋತ್ಸವ ಮಾಡಲು ಪಣತೊಟ್ಟ ಗಜಾನನ ಮಂಡಳಿಗೆ ಹಾಗೂ ಕೆಲ ಸಂಘಟನೆಗಳಿಗೆ ಸಿಹಿ ಉಂಡೆಗಳು ಸಿಗುತ್ತಾ ಅಥವಾ ಕಹಿ ಉಂಡೆಗಳು ಸಿಗುತ್ತಾ ಎಂಬುದನ್ನು ಇದೇ ಆಗಸ್ಟ್ 25 ರಂದು ತಿಳಿಯಬೇಕಿದೆ...

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/08/2022 10:01 am

Cinque Terre

60.33 K

Cinque Terre

2

ಸಂಬಂಧಿತ ಸುದ್ದಿ