ಕುಂದಗೋಳ : ಸರ್ಕಾರ ನಿಮ್ಮೂರು ನಿಮ್ಮೂರಿನ ಕೆರೆ ಅಭಿವೃದ್ಧಿ ಮಾಡಿಕೊಳ್ರಪ್ಪಾ ಎಂದು ಅಮೃತ ಸರೋವರ ಯೋಜನೆ ಕೋಟ್ರೆ, ಇಲ್ಲೋಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರ್ಕಾರದ ನಿಯಮ ಗಾಳಿ ತೂರಿ ಕರ್ತವ್ಯ ಲೋಪ ಎಸಗಿ ಅಮಾನತು ಆಗಿದ್ದಾರೆ.
ಇದ್ಯಾವ ಊರು ಅಂದ್ರಾ ? ಇದೇ ಸ್ವಾಮಿ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಅಮೃತ ಸರೋವರ ಯೋಜನೆ ಕಥೆ.
ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಲ್ಲಾಪೂರ ಗ್ರಾಮದ ಅಮೃತ ಸರೋವರ ಯೋಜನೆಯ ಅಭಿವೃದ್ಧಿ ನೆಪದಲ್ಲಿ ನರೇಗಾ ಮಾರ್ಗಸೂಚಿ ಅನ್ವಯ ಖರ್ಚಾಗಿದ್ದು 1.49.247 ರೂಪಾಯಿ ಉಳಿದಂತೆ ಸ್ಥಳದಲ್ಲಿ ಕಾಮಗಾರಿ ಸಲಕರಣೆ ಇರದೆ ಇದ್ದರೂ ಎಂ.ಐ.ಎಸ್ ಅಳವಡಿಸುವ ಮುನ್ನ ಸ್ಥಳೀಯ ಜಿಲ್ಲಾ ಪಂಚಾಯತ್ ಸಹಾಯಕ ಅಭಿಯಂತರರಿಂದ ಚೆಕ್ ಮೇಸರಮೇಂಟ್ ಮಾಡಿಸದೇ ಅಮೃತ ಸರೋವರ ಯೋಜನೆಗೆ ಬರೋಬ್ಬರಿ 26 ಲಕ್ಷದ ಸಾಮಗ್ರಿ ಮೊತ್ತವನ್ನು ಎಂ.ಐ.ಎಸ್'ನಲ್ಲಿ ಅಳವಡಿಸಿ ಕರ್ತವ್ಯಲೋಪ ಮಾಡಿದ್ದಾರೆ.
ಈ ಕಾರಣದಿಂದ ಗುಡೇನಕಟ್ಟಿ ಪಿಡಿಓ ಎಸ್.ಎಲ್.ಜೀವಣ್ಣನವರ, ತಾಲೂಕು ಪಂಚಾಯಿತಿ ತಾಂತ್ರಿಕ ಸಹಾಯಕ ಶಿವಕುಮಾರ್ ಹಂಚಿನಮನಿ ಅವರನ್ನು ಅಮಾನತು ಮಾಡಿದ್ರೇ ತಾಲೂಕು ಪಂಚಾಯಿತಿ ಸಂಯೋಜಕ ಶಿವಾನಂದ ಚಿತ್ತಕಾಲ ಇವರಿಗೆ ಕಾರಣ ಕೇಳಿ ಅ.3 ರಂದು ಪಂಚಾಯತ್ ಆದೇಶ ಹೊರಡಿಸಿದೆ.
ಇನ್ನೂ ಈ 26 ಲಕ್ಷ ಮೇಸರಮೇಂಟ್ ಮಾಡಿಸದೇ ಎಂ.ಐ.ಎಸ್ ಮಾಡಿದ ಬಗ್ಗೆ ಕಾಮಗಾರಿಗೆ ಸಂಬಂಧಪಟ್ಟವರ ಜೊತೆ ಮಾತನಾಡಿದ್ರೇ, ಸ್ಥಳಕ್ಕೆ ಎಷ್ಟೇ ಕರೆದರೂ ಕರೆ ಮಾಡಿದ್ರೂ ಜಿಲ್ಲಾ ಪಂಚಾಯತ್ ಮುಖ್ಯ ಅಭಿಯಂತರರು ಬಂದಿಲ್ಲಾ ಎಂತಾರೇ ಈ ಬಗ್ಗೆ ಸ್ವತಃ ಅಧಿಕಾರಿಗಳ ಉತ್ತರ ಕೇಳಿ.
ಸದ್ಯ ಪ್ರಕರಣ ಜಿಲ್ಲೇಯಾದ್ಯಂತ ಎಲ್ಲೇಡೆ ಸುದ್ದಿಯಾಗಿದ್ದು, ಈ ವಿಷಯದ ಕುರಿತು ತನಿಖಾ ವರದಿಯನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಹಂತ ಹಂತವಾಗಿ ತೆರದಿಡಲಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
07/09/2022 04:52 pm