ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಜನಪ್ರಿಯತೆ ಪಡೆಯುತ್ತಿರುವ ಸೇವೆ. ಮೊದಲಿಗೆ ಅಷ್ಟೇನೂ ಜನಮನ್ನಣೆ ಪಡೆಯದಿದ್ದರೂ ಪ್ರಸ್ತುತ ದಿನಮಾನಗಳಲ್ಲಿ ಚೇತರಿಕೆ ಕಂಡಿದೆ. ಈಗ ಮತ್ತೊಂದು ಸೇವೆಯಿಂದ ಸಾರ್ವಜನಿಕ ಸೇವೆಗೆ ಸನ್ನದ್ಧವಾಗಿದ್ದು, ಈಗ ಸರಕು ಸಾಗಣೆ ಗೊಂದಲದಿಂದ ಪ್ರಯಾಣಿಕರನ್ನು ಮುಕ್ತ ಮಾಡುವಂತಾಗಿದೆ. ಹಾಗಿದ್ದರೇ ಏನಿದು ಸೇವೆ ಅಂತೀರಾ ಈ ಸ್ಟೋರಿ ನೋಡಿ..
ನಿನ್ನೆಯಷ್ಟೇ ಐಎಲ್ಎಸ್ ಸೇವೆಯನ್ನು ಪ್ರಾರಂಭ ಮಾಡುವ ಮೂಲಕ ವೈಜ್ಞಾನಿಕ ವಿಮಾನ ಲ್ಯಾಂಡಿಂಗ್ ಸೇವೆಯನ್ನು ಪ್ರಾರಂಭ ಮಾಡಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ಕಾರ್ಗೋ ಸೇವೆಯನ್ನು ಆರಂಭ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹೌದು.. ವಾಣಿಜ್ಯನಗರಿ ಹುಬ್ಬಳ್ಳಿಯ ವಾಣಿಜ್ಯ ಚಟುವಟಿಕೆಗಳ ಹಬ್ ಆಗಿದ್ದು, ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಪ್ರಯಾಣಿಕರಿಗೆ ವಿಮಾನ ಸೇವೆಯನ್ನು ನೀಡುವಂತೆ ಸರಕು ಸಾಗಣೆ ಮಾಡಲು ಈಗ ಕಾರ್ಗೋ ಸೇವೆಯನ್ನು ಪ್ರಾರಂಭ ಮಾಡಲು ಚಿಂತನೆ ನಡೆಸಿದ್ದು, ಮಾರ್ಚ್-14 ರಿಂದ ಕಾರ್ಗೋ ಸೇವೆಯ ಕಾಮಗಾರಿ ಆರಂಭಗೊಂಡಿದೆ.
ದೇಶಾದ್ಯಂತ ಹಲವಾರು ರಾಜ್ಯಗಳ ಪ್ರಮುಖ ಪ್ರದೇಶದ ಮೂಲಕ ವಾಣಿಜ್ಯ ವಹಿವಾಟು ಹೊಂದಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ಆರ್ಥಿಕ ಚಟುವಟಿಕೆಗಳನ್ನು ಮತ್ತಷ್ಟು ವೃದ್ಧಿಸಲು ಈ ಚಿಂತನೆ ನಡೆಸಲಾಗಿದ್ದು, ನಿಮ್ಮ ಯಾವುದೇ ಸರಕುಗಳನ್ನು ಸುರಕ್ಷಿತ ಹಾಗೂ ತುರ್ತು ಸೇವೆಯನ್ನು ನೀಡಲು ಕಾರ್ಗೋ ಸೇವೆ ಸಿದ್ಧವಾಗುತ್ತಿದೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿದ್ದು, ಇನ್ನೂ ಕೆಲವು ದಿನಗಳಲ್ಲಿ ಸೇವೆ ಆರಂಭಗೊಳ್ಳಲಿದೆ.
ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಜನಪ್ರಿಯತೆ ಪಡೆಯುತ್ತಿದ್ದು, ಕೊರೋನಾ ನಂತರದ ದಿನಗಳಲ್ಲಿ ಸಾಕಷ್ಟು ಏರಿಕೆ ಕಂಡಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜನಪ್ರಿಯತೆ ಪಡೆಯುವ ಮೂಲಕ ಜನರಿಗೆ ಗುಣಮಟ್ಟದ ಸೇವೆ ನೀಡಲಿ ಎಂಬುವುದು ನಮ್ಮ ಆಶಯ...
Kshetra Samachara
14/08/2021 12:42 pm