ಹುಬ್ಬಳ್ಳಿ: ತಮ್ಮ ಬೇಡಿಕೆ ಈಡೇರಿಸುವಂತೆ ಸಾರಿಗೆ ಸಂಸ್ಥೆ ಸಿಬ್ಬಂದಿ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಯಾವುದೇ ರೀತಿಯ ಸ್ಪಂದನೆ ನೀಡದೇ ಇರುವುದರಿಂದ ಹಠಾತ್ ಆಗಿ ಶುಕ್ರವಾರ ಬೆಳಗಿನಿಂದ ಚಾಲಕ, ನಿರ್ವಾಹಕರು ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದು,ಪ್ರಯಾಣಿಕರು ಕಂಗಾಲಾಗಿ ನಿಲ್ದಾಣದಲ್ಲೆ ಕಾಯುತ್ತಾ ಕುಳಿತಿದ್ದಾರೆ.
ಹಳೇ ಬಸ್ ನಿಲ್ದಾಣ, ಹೊಸ ನಿಲ್ದಾಣ ಹಾಗೂ ಹೊಸೂರ ಟರ್ಮಿನಲ್ ನಲ್ಲಿ ಬಸ್ ಗಳು ನಿಂತಿದ್ದು, ನೂರಾರು ಪ್ರಯಾಣಿಕರು ಹತಾಶಯರಾಗಿ ಬಸ್ ಸಂಚಾರ ಸ್ಟಾರ್ಟ್ ಆಗಬಹುದು ಎಂಬುದು ಆಶಯದೊಂದಿಗೆ ಕುಳಿತಿದ್ದಾರೆ.
ಬೆಳ್ಳಂ ಬೆಳಗ್ಗೆ ಹಳೆ ನಿಲ್ದಾಣದ ಹೊರಗಡೆಯಿಂದ ಪ್ರತಿಭಟನೆ ನಡೆಸಿದ ಸಿಬ್ಬಂದಿ ಸಂಚಾರವನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿದರು. ಕರ್ತವ್ಯದಿಂದ ದೂರ ಉಳಿದಿದ್ದಾರೆ.
ಬಹಳಷ್ಟು ಬಸ್ ಗಳು ಡಿಪೋ ದಿಂದ ಕದಲಿಲ್ಲ. ಹೊರಗಡೆಯಿದ್ದ ಬಸ್ಸಗಳನ್ನೂ ನಿಲ್ದಾಣದಲ್ಲಿ ನಿಲ್ಲಿಸುತ್ತಿದ್ದು, ಪ್ರಯಾಣೀಕರು ಪರದಾಡುವಂತಾಗಿದೆ.
ಹೊಸೂರು ಸರ್ಕಲ್, ಐಟಿ ಪಾರ್ಕ ಬಳಿಯೂ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಎಲ್ಲ ಬಸ್ ಗಳು ಬಂದಾಗಿವೆ. ಸಾರಿಗೆ ನೌಕರರನ್ನ ಸರಕಾರಿ ನೌಕರರು ಎಂದು ಪರಿಗಣಿಸಬೇಕು.
ಅವರನ್ನೂ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ನಡೆಯುತ್ತಿದೆ.
ರಾಜ್ಯ ಸರಕಾರ ಕಳೆದ ಎರಡು ದಿನಗಳಿಂದಲೂ ಯಾವುದೇ ರೀತಿಯ ಪ್ರತಿಕ್ರಿಯೆ ಕೊಡದ ಹಿನ್ನೆಲೆಯಲ್ಲಿ ಅವಳಿನಗರದಲ್ಲಿಯೂ ಬಸ್ ಸಂಚಾರ ಸ್ಥಗಿತ ಮಾಡಿದ್ದು, ಸರಕಾರಕ್ಕೆ ನುಂಗಲಾರದ ತುತ್ತಾಗಲಿದೆ.
ಸಿಬ್ಬಂದಿ ದಿಡೀರ್ ಹೋರಾಟದಿಂದ ದೂರದೂರಿಂದ ಬಂದವರು ಸಂಕಟಪಡುವಂತಾಗಿದೆ.
Kshetra Samachara
11/12/2020 12:49 pm