ಕುಂದಗೋಳ : ಈ ಕುಂದಗೋಳ ಪಟ್ಟಣದಲ್ಲಿ ಒಂದು ಬೃಹದಾಕಾರದ ಕಾಲುವೆ ಇದೆ. ಈ ಕಾಲುವೆ ಅಷ್ಟೇ ಅನೈರ್ಮಲ್ಯವನ್ನು ತುಂಬಿಕೊಂಡು ಸ್ಥಳೀಯರಿಗೆ ಅನಾರೋಗ್ಯದ ಭೀತಿ ಎದುರಾಗಿದೆ.
ಇದ್ಯಾವುದಪ್ಪಾ ಕಾಲುವೆ ಅಂದ್ರಾ ? ಇದೇ ಸ್ವಾಮಿ ಈ ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆಯ ಸರ್ಕಾರಿ ಕ್ವಾರ್ಟರ್ಸ್ ಪಕ್ಕದಲ್ಲೇ ಹರಿಯುತ್ತೆ ಅಲ್ಲಾ ಅದೆ ನೋಡಿ. ಕುಂದಗೋಳ ಸರ್ಕಾರಿ ಆಸ್ಪತ್ರೆ, ಪೊಲೀಸ್ ಕ್ವಾರ್ಟರ್ಸ್ ಬಳಸಿದ ನೀರು ಅದರ ಜೊತೆ ಸರ್ಕಾರಿ ಆಸ್ಪತ್ರೆಯಲ್ಲಿ ಬಳಸಿದ ತ್ಯಾಜ್ಯ ಹೊತ್ತು ತರೋ ಈ ಕಾಲುವೆಯಲ್ಲಿ ಸಲಾಯನ್ ಬಾಟಲ್, ಇಂಜೆಕ್ಷನ್ ಅಷ್ಟೇ ಅಲ್ಲಾ ಸ್ವಾಮಿ ಈ ಪ್ಲಾಸ್ಟಿಕ್ ಜೊತೆ ನಿರ್ವಹಣೆ ಕಾಣದ ಕಸ ಬೆಳೆದು ದುರ್ನಾತ ಹೆಚ್ಚಾಗಿದೆ.
ಈ ಕಾಲುವೆಗೆ ಹೊಂದಿಕೊಂಡು ಮನೆಗಳಿದ್ದು ನಿತ್ಯ ಸೊಳ್ಳೆ ಕಾಟ ಹೆಚ್ಚಾಗಿದೆ, ಇತ್ತ ಸರ್ಕಾರಿ ಕ್ವಾರ್ಟರ್ಸ್ ಇರುವ ಕುಟುಂಬಗಳಿಗೂ ಇದೆ ಅನೈರ್ಮಲ್ಯದ ವಾತಾವರಣ ಕಾಡ್ತಾ ಇದ್ದು, ಸಾರಾಯಿ ಬಾಟಲಿಗಳು ಸಹ ಚರಂಡಿಯಲ್ಲಿ ಬಿದ್ದಿವೆ.
ಈ ಬಗ್ಗೆ ನಮ್ಮ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನಿಸಿ ಈ ಚರಂಡಿಗೆ ಸ್ವಚ್ಚತಾ ಭಾಗ್ಯ ಕರುಣಿಸಿದ್ರೇ ನಮ್ಮ ಕುಂದಗೋಳಿಗರಿಗೆ ಒಳಿತು.
Kshetra Samachara
06/12/2020 10:48 am