ನವಲಗುಂದ : ಬೀದಿ ದೀಪಗಳಿರೋ ರಸ್ತೆಯಲ್ಲೇ ರಾತ್ರಿ ವೇಳೆ ಸಂಚರಿಸೋಕೆ ಭಯ ಪಡೋ ಸನ್ನಿವೇಶ ಇರುವಾಗ ಬೀದಿ ದೀಪಗಳೇ ಇರದ ರಸ್ತೆಯಲ್ಲಿ ಸಂಚರಿಸೋಕೆ ಆಗುತ್ತಾ, ಜನರು ಭಯದ ವಾತಾವರಣದಲ್ಲೇ ಇಲ್ಲಿ ಸಂಚಾರಿಸುವ ಪರಿಸ್ಥಿತಿ ಇಲ್ಲಿ ಬಂದೊದಗಿದೆ.
ಹೌದು ಈ ರಸ್ತೆ ನವಲಗುಂದ ಪಟ್ಟಣದ ಬಸವೇಶ್ವರ ನಗರಕ್ಕೆ ಹೋಗುತ್ತೆ, ಎತ್ತ ನೋಡಿದರು ಜಾಲಿ ಗಿಡಗಳಿಂದ ತುಂಬಿದ ಈ ಸ್ಥಳದಲ್ಲಿ ರಾತ್ರಿ ವೇಳೆ ಮಹಿಳೆಯರು ಮಕ್ಕಳು ಇರಲಿ, ಪುರುಷರೇ ಸಂಚರಿಸಲು ಭಯ ಹುಟ್ಟುವಂತ ರಸ್ತೆ ಇದಾಗಿದೆ ಎಂದ್ರು ತಪ್ಪಿಲ್ಲಾ, ಯಾಕಂದ್ರೆ ಈ ರಸ್ತೆಯಲ್ಲಿ ಇರುವ ಬೀದಿ ದೀಪಗಳು ಅಲ್ಲೊಂದು ಇಲ್ಲೊಂದು ಮಾತ್ರ ಉರಿಯುತ್ತವೆ. ಒಂದೊಂದು ಕಂಬಗಳಲ್ಲಿ ದೀಪಗಳೇ ಇಲ್ಲಾ, ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಜನರು ಭಯದಿಂದ ಮುಕ್ತಾರಾಗಬೇಕು ಅಂದ್ರೆ ಈ ರಸ್ತೆಯಲ್ಲಿರುವ ಪ್ರತಿಯೊಂದು ದೀಪಗಳು ಉರಿಯಬೇಕು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಇಲ್ಲಿರುವ ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸ ಮಾಡಬೇಕಿದೆ.
Kshetra Samachara
03/12/2020 01:34 pm