ನವಲಗುಂದ : ಈಗಾಗಲೇ ನವಲಗುಂದ ಮಾರುಕಟ್ಟೆಯಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಕಾಡತೊಡಗಿದ್ದು, ಇಂತಹ ಪರಿಸ್ಥಿತಿಯಲ್ಲೂ ಕಳೆದ ಹಲವು ದಿನಗಳಿಂದ ನಾಗಲಿಂಗಜ್ಜ ಮಠಕ್ಕೆ ಹೋಗುವ ದಾರಿಯಲ್ಲಿ ಮಣ್ಣಿನ ರಾಶಿ ಹಾಕಲಾಗಿದೆ. ಇದರಿಂದಾಗಿ ಜನ ಸಂಚಾರಕ್ಕೆ ತೀರಾ ತೊಂದರೆ ಉಂಟಾಗಿದೆ.
ಇಲ್ಲಿ ರಸ್ತೆ ನಿರ್ಮಾಣ ವಾಗುತ್ತಿದ್ದು, ಕ್ಯೂರಿಂಗ್ ಗಾಗಿ ಈ ರೀತಿ ಗೇಟ್ ಹಾಕಿ ಮಣ್ಣಿನ ರಾಶಿ ಹಾಕಲಾಗಿದೆ. ಆದರೆ ಇದರಿಂದ ರಸ್ತೆಯ ನಿವಾಸಿಗಳಿಗೂ ತೊಂದರೆಯುಂಟಾಗುತ್ತಿದೆ. ಅಷ್ಟೇ ಅಲ್ಲದೇ ಈಗ ಹಂದಿಗಳು ಸಹ ಇಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಸಿಕ್ಕ ಸಿಕ್ಕವರು ಉಗುಳಿ ಸ್ಥಳವನ್ನು ಹಾಳು ಮಾಡುತ್ತಿದ್ದಾರೆ.
ಇನ್ನೂ ದೀಪಾವಳಿಗೂ ಮುನ್ನ ಈ ರಸ್ತೆ ಬಂದ್ ಆಗಿದ್ದು, ಹಬ್ಬದಲ್ಲಂತೂ ಸಾರ್ವಜನಿಕರಿಗೆ ಇದರಿಂದ ಸಾಕಷ್ಟು ತೊಂದರೆ ಉಂಟಾಗಿತ್ತು, ಆದರೆ ಇದುವರೆಗೂ ಸಹ ಈ ರಸ್ತೆಯನ್ನು ವಾಹನ ಮತ್ತು ಜನ ಸಂಚರಿಸಲು ಅನುವು ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ರಸ್ತೆಯಲ್ಲಿ ಗೇಟ್ ಹಾಕಿ ಸಂಚಾರವನ್ನು ತಡೆದ ಉದ್ದೇಶ ಏನೇ ಇರಲಿ, ಸಾರ್ವಜನಿಕರ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆಯ ಮಣ್ಣನ್ನು ಆದಷ್ಟು ಬೇಗ ತೆರವು ಮಾಡಲು ಮುಂದಾಗ ಬೇಕಿದೆ.
Kshetra Samachara
25/11/2020 05:33 pm