ನವಲಗುಂದ : ನವಲಗುಂದದ ಅಂಬೇಡ್ಕರ್ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಅಂತೂ ಅಚ್ಚುಕಟ್ಟಾಗಿ ಮಾಡಲಾಗಿದೆ. ಆದ್ರೆ ಅದನ್ನು ಸಂಪೂರ್ಣ ಮಾಡದೆ ಹೋಗಿದ್ದೆ ಈಗ ಇಲ್ಲಿನ ಜನರಲ್ಲಿ ಆತಂಕಕ್ಕೆ ದುಡಿದ್ದಂತಾಗಿದೆ. ಒಳಚರಂಡಿ ವ್ಯವಸ್ಥೆ ಏನೋ ಆಗಿದೆ ಆದರೆ ಚರಂಡಿಯಲ್ಲಿ ಸಿಲುಕಿದ ಕಸವನ್ನು ತೆಗೆಯಲು ಅಲ್ಲಲ್ಲಿ ಹೊಲ್ ಗಳನ್ನು ಬಿಡಲಾಗಿದ್ದು, ಇದರಿಂದ ಜನರು ಬೇಸತ್ತು ಹೋಗಿದ್ದಾರೆ.
ಈ ಒಳಚರಂಡಿಗಿರುವ ಹೊಲ್ ಗಳಿಗೆ ಮುಚ್ಚುವ ಮತ್ತು ತೆಗೆಯುವ ವ್ಯವಸ್ಥೆ ಮಾಡದೇ ಇರುವುದೇ ಇಲ್ಲಿನ ಸಮಸ್ಯೆಗೆ ಪ್ರಮುಖ ಕಾರಣ ಮತ್ತು ರಾತ್ರಿ ವೇಳೆ ಇಲ್ಲಿ ಸಂಚರಿಸೊ ಅದೆಷ್ಟೋ ದ್ವಿಚಕ್ರ ವಾಹನ ಸವಾರರು ಹೊಲ್ ಗಳನ್ನು ಕಾಣದೆ ಬಿದ್ದಿದ್ದಾರೆ.
ಇನ್ನೂ ಕೆಲವು ಹೊಲ್ ಗಳಿಗೆ ಸ್ಥಳೀಯರೇ ಕಲ್ಲುಗಳನ್ನು ಇಟ್ಟಿದ್ದಾರೆ, ಇನ್ನೂ ಮಿಕ್ಕ ಹೊಲ್ ಗಳು ಹಾಗೆಯೇ ಬಾಯ್ತೆರೆದು ಕೂತಿವೆ. ಸ್ಥಳೀಯರಂತೂ ಅದೆಷ್ಟು ಬಾರಿ ಇಲ್ಲಿ ಬಿದ್ದಿದ್ದಾರೋ ಲೆಕ್ಕವೇ ಇಲ್ಲಾ, ಇನ್ನೂ ಸಂಜೆ ಆದ್ರೆ ಸಾಕು ಈ ಚರಂಡಿಗಳಿಂದ ದುರ್ವಾಸನೆ ಬರೋದಲ್ಲದೆ ಸೊಳ್ಳೆಗಳ ಕಾಟ ಬೇರೆ, ಇದಕ್ಕೆಲ್ಲಾ ಪರಿಹಾರ ಸಿಗೋದು ಯಾವಾಗ ಅನ್ನೋದು ಇಲ್ಲಿನ ಸ್ಥಳೀಯಾರ ಆಕ್ರೋಶ...
Kshetra Samachara
20/11/2020 06:54 pm