ಕುಂದಗೋಳ : ಈ ಗ್ರಾಮೀಣ ಮಟ್ಟದಲ್ಲಿ ಉಂಟಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವೇ ದೊರಕುತ್ತಿಲ್ಲ ನೋಡಿ, ಈ ಪಾಲಿಗೆ ಶಿರೂರು ಗ್ರಾಮ ಸಹ ಹೊರತಾಗಿಲ್ಲ, ಸರಿ ಸುಮಾರು 4000 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕವಿದ್ದರೂ ಗ್ರಾಮಸ್ಥರಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ.
ಕುಂದಗೋಳ ತಾಲೂಕಿನ ಶಿರೂರು ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಊರಲ್ಲಿರುವ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಒಂದು ಕೆಟ್ಟು ಹೋಗಿದೆ, ಇನ್ನೊಂದು ಚಾಲ್ತಿಯಲ್ಲಿದ್ದರು ಜನ ಸಾಲಾಗಿ ಕೊಡಗಳನ್ನ ಪಾಳೆಗಿಟ್ಟು ತಾಸು ಗಟ್ಟಲೇ ಕಾಯ್ಬೆಕು, ಈ ಆರಂಭವಿರೋ ಶುದ್ಧ ನೀರಿನ ಘಟಕ ಸಮರ್ಪಕವಾಗಿ ನೀರು ಪೂರೈಸದೆ ಕೆಲವೂಮ್ಮೆ ತಾಂತ್ರಿಕ ದೋಷ ಕಂಡಿದ್ದು ಈ ಸಮಯ ಶಿರೂರು ಗ್ರಾಮಸ್ಥರು ಸೀದಾ ಕುಂದಗೋಳ ಪಟ್ಟಣಕ್ಕೆ ಹೋಗಿ ನೀರು ತಂದಿದ್ದಾರೆ.
ಗ್ರಾಮದಲ್ಲಿರುವ ಕುಡಿಯುವ ನೀರಿನ ಕೆರೆ ನಿರ್ವಹಣೆ ಕಾಣದೆ ಅವ್ಯವಸ್ಥೆ ಹಾದಿ ಹಿಡಿದು ಕುಡುಕರ ಅಡ್ಡೆಯಾದ್ರೂ ಈ ಬಗ್ಗೆ ಅದ್ಯಾವ ಪಂಚಾಯಿತಿ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
Kshetra Samachara
11/11/2020 07:44 am