ಕುಂದಗೋಳ : ಈ ಹಳ್ಳಿಗಳನ್ನು ಬಯಲು ಶೌಚ ಮುಕ್ತ ಮಾಡಿ ಶೌಚಾಲಯ ಕಲ್ಪಿಸಬೇಕಿದ್ದ ತಾಲೂಕು ಪಂಚಾಯಿತಿ ಅಧಿಕಾರಿಗಳೇ ಇಂದು ಜನರನ್ನು ಬಯಲು ಶೌಚಕ್ಕೆ ಅಟ್ಟುತಿದ್ದಾರೆ.
ಹೌದು ! ಮಳೆಗಾಲದ ಈ ಅತಿವೃಷ್ಟಿ ಪರಿಣಾಮ ಹಳ್ಳಿಗಳಲ್ಲಿ ನಿರ್ಮಾಣವಾದ ಬಹುತೇಕ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ತುಂಬಿ ಹೋಗಿದ್ದು, ಆ ತ್ಯಾಜ್ಯ ವಿಲೇವಾರಿ ಮಾಡಬೇಕಾದ ತಾಲೂಕು ಪಂಚಾಯಿತಿಯ ಜೆಟ್ಟಿಂಗ್ ಮೆಷಿನ್ 2017 ರಲ್ಲೇ ಜಿಲ್ಲಾ ಪಂಚಾಯತಿಯಿಂದ ತಾಲೂಕು ಪಂಚಾಯಿತಿ ತಲುಪಿದ್ದರೂ ಒಂದು ದಿನ ಸಹ ಬಳಕೆಗೆ ಬಂದಿಲ್ಲಾ.
ಈ ಬಗ್ಗೆ ತಾಲೂಕು ಪಂಚಾಯಿತಿ ಮ್ಯಾನೇಜರ್ ಬಡೇಖಾನ್ ಸಾಹೇಬ್ರು ಜಿಲ್ಲಾ ಪಂಚಾಯಿತಿ ನಮ್ಗೆ 2017ರಾಗ ಮೆಷಿನ್ ಕೊಟೈತಿ ಆಂದ್ರ ಅದನ್ನ ನಿರ್ವಹಣೆ ಮಾಡಾಕ ನಮ್ಮಲ್ಲಿ ಸಿಬ್ಬಂದಿಗಳೇ ಇಲ್ಲಾ, ಅವ್ರು ಸಿಬ್ಬಂದಿ ಕೊಟ್ಟಿಲ್ಲ ಎಂದ್ರು ವಿಚಿತ್ರ ಎನಪ್ಪಾ ಅಂದ್ರೆ ಈ ಹಿಂದೆ ನಾವೇ ಸುದ್ಧಿ ಬರೆದಾಗ ಕೊರೊನಾ ಐತ್ರೀ ಮೆಷಿನ್ ಕೆಟ್ಟತಿ ರಿಪೇರಿ ಮಾಡಾಕ್ ಅಡ್ವಾನ್ಸ್ ದುಡ್ಡು ಹಾಕೇವಿ ಲಾಕ್ ಡೌನ್ ಕಾರಣ ದುರಸ್ತಿ ಮಾಡೋವಾ ಬೇರೆ ರಾಜ್ಯದಿಂದ ಬರ್ಬೇಕು ಬಂದಿಲ್ಲಾ ಎಂದಿದ್ದರು.
ಈ ವಿಷಯ ಗಮನಿಸಿದ್ರೆ ಎಂದು ಉಪಯೋಗಿಸದ ಮೆಷಿನ್ ಕೆಟ್ಟದ್ದು ಹೇಗೆ ? ಮೆಷಿನ್ ಆಪರೇಟರ್ ಇಲ್ಲಾ ಅಂದ್ಮೇಲೆ ಮಷಿನ್ ಅಷ್ಟೇ ತಾಲೂಕು ಪಂಚಾಯಿತಿಗೆ ಹೇಗೆ ತಂದ್ರು ? ಈ ಹಳ್ಳಿಗಳಲ್ಲಿ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ತುಂಬಿರೋ ಜನರ ಗತಿಯೇನು ? ಎಂಬುದಕ್ಕೆ ಅಧಿಕಾರಿಗಳ ಬಳಿ ಉತ್ತರ ಇಲ್ಲಾ.
ಒಟ್ಟಾರೆ ಸತತ ಮೂರು ವರ್ಷಗಳಿಂದ ಜೆಟ್ಟಿಂಗ್ ಮಷಿನ್ ಹಾಗೂ ಸುಸಜ್ಜಿತ ಟ್ರ್ಯಾಕ್ಟರ್ ನಿಷ್ಪ್ರಯೋಜಕವಾಗಿ ತಾಲೂಕು ಪಂಚಾಯಿತಿ ಆವರಣದಲ್ಲಿ ತುಕ್ಕು ಹಿಡಿಯುತ್ತಿದೆ.
Kshetra Samachara
10/11/2020 06:57 pm