ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿತ್ತನೆ ಬೀಜ ಖರೀದಿಗೆ ಸರ್ವರ್‌ ಕಿರಿಕಿರಿ! ಇತ್ತ ರೈತರ ಗೋಳು ಕೇಳುವವರು ಯಾರು

ಹುಬ್ಬಳ್ಳಿ: ಒಂದು ಕಡೆ ಬಿತ್ತನೆ ಬೀಜ ವಿತರಣೆಗೆ ತೆರೆದಿರುವ‌ ರೈತ ಸಂಪರ್ಕ ಕೇಂದ್ರ, ಇನ್ನೊಂದೆಡೆ ಬಿತ್ತನೆ ಬೀಜಕ್ಕಾಗಿ ಸರತಿ‌ ಸಾಲಿನಲ್ಲಿ ನಿಂತಿರುವ ರೈತರು, ಬೀಜ ಸಿಗದೇ ನಿತ್ಯ ಪರದಾಟ ನಡೆಸುತ್ತಿರುವ ಅನ್ನದಾತರು- ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ಜಿಲ್ಲೆಯಲ್ಲಿ.

ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಧಾರವಾಡ ಹಾಗೂ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಕಡಲೆ ಬಿತ್ತನೆ ಬೀಜದ ಕೊರತೆ ಕಾಡುತ್ತಿದೆ. ಅದಕ್ಕೆ ಕಾರಣ ರಾಜ್ಯ ಸರ್ಕಾರ ಮಾಡಿರುವ ವ್ಯವಸ್ಥೆ. ರಾಜ್ಯ ಸರ್ಕಾರ ರೈತ ಸಂಪರ್ಕ ಕೇಂದ್ರದಲ್ಲಿ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದ್ದು ರೈತರಿಗೆ ಕಿರಿಕಿರಿ ತಂದಿದೆ. ಯಾವುದೇ ಬೀಜ ಖರೀದಿಗೆ ಆನ್ಲೈನ್ ಮೂಲಕ ನೊಂದಣಿ‌ ಮಾಡಿಕೊಳ್ಳಬೇಕು. ಹೀಗಾಗಿ ಪ್ರತಿಯೊಬ್ಬ ರೈತರು ಆನ್ಲೈನ್ ಮೂಲಕ ನೊಂದಣಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಸರ್ವರ್‌ ಸಮಸ್ಯೆ ಕಾಡುತ್ತಿದೆ ಎಂದು ರೈತರು ಗೋಳಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 1,75,407 ಹೆಕ್ಟೇರ್ ಪ್ರದೇಶವನ್ನು ಹಿಂಗಾರು ಗುರಿಯಾಗಿ ಕೃಷಿ ಇಲಾಖೆ ಗುರುತಿಸಿದೆ. ಅದರಲ್ಲಿ 87,220 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೀಜ ಬಿತ್ತನೆಯೆ ಗುರಿ‌ಹೊಂದಲಾಗಿದೆ. ಹೀಗಾಗಿ ರೈತರು ನಿತ್ಯ ರೈತ ಸಂಪರ್ಕ ಕೇಂದ್ರದ ಎದುರು ಸರತಿ ಸಾಲಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ನಿಂತು ಬೀಜಕ್ಕಾಗಿ ಅಲೆದಾಟ ನಡೆಸಿದ್ದಾರೆ. ಪ್ರತಿಯೋರ್ವ ರೈತನಿಗೆ 4 ಪಾಕೇಟ್ ಬೀಜ ನೀಡಲಾಗುತ್ತಿದ್ದು, ಎಲ್ಲ ರೈತರಿಗೆ ಸರಿಯಾಗಿ ಕಡಲೆ ಬೀಜ ಪೂರೈಕೆ ಆಗುತ್ತಿಲ್ಲ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಕೇಳಿದ್ರೆ, ಜಿಲ್ಲೆಯಲ್ಲಿ ಈ ರೀತಿ ಸರ್ವರ್ ಸಮಸ್ಯೆ ಇಲ್ಲ ಎನ್ನುತ್ತಾರೆ.

ಈ ಬಾರಿ ಸರಿಯಾದ ಮಳೆ ಆಗಿದ್ದರಿಂದ ಭೂಮಿ ತೇವಾಂಶ ಹೊಂದಿದ್ದು, ಸಮಯಕ್ಕೆ ಸರಿಯಾಗಿ ಬೀಜ ಸಿಕ್ಕರೆ ಬಿತ್ತನೆ ಮಾಡುತ್ತಾರೆ. ಆದರೆ, ಬೀಜ ಇದ್ದರೂ ಸರ್ವರ್ ಸಮಸ್ಯೆಯಿಂದ ಬಿತ್ತನೆ ಬೀಜ ಸಿಗದೇ ರೈತರ ನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿರೋದು ವಿಪರ್ಯಾಸದ ಸಂಗತಿಯೇ ಸರಿ.

-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

17/10/2021 05:21 pm

Cinque Terre

40 K

Cinque Terre

0

ಸಂಬಂಧಿತ ಸುದ್ದಿ