ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ರೈತರ ಪ್ರತಿಭಟನೆ

ನವಲಗುಂದ : ಪ.ಜಾತಿ ಮತ್ತು ಪ.ಪಂಗಡಕ್ಕೆ ಕೇವಲ 18 ತಾಡಪತ್ರಿ ಬಂದಿದ್ದು, ಸಾಮಾನ್ಯ ವರ್ಗಕ್ಕೆ 800 ತಾಡಪತ್ರಿ ಬಂದಿವೆ. ಇದರಿಂದ ಆಕ್ರೋಶಗೊಂಡ ರೈತರು ಶುಕ್ರವಾರ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಈಗಾಗಲೇ ಸಾಮಾನ್ಯ ವರ್ಗಕ್ಕೆ 800 ತಾಡಪತ್ರಿ ಬಂದಿವೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಕೇವಲ 18 ತಾಡಪತ್ರಿ ಬಂದಿವೆ. ಇನ್ನು ಸಾಮಾನ್ಯ ವರ್ಗಕ್ಕೆ 800 ತಾಡಪತ್ರಿ ಬಂದರೆ ಪರಿಶಿಷ್ಟ ಜಾತಿಗೆ 400 ಹಾಗೂ ಪರಿಶಿಷ್ಟ ಪಂಗಡಕ್ಕೆ 200 ತಾಡಪತ್ರಿ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಹೆಚ್ಚಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ನಂತರ ಸ್ಥಳಕ್ಕೆ ಧಾವಿಸಿದ ಕೃಷಿ ಇಲಾಖೆ ಸಿಬ್ಬಂದಿ ಈಗಿರುವ 18 ತಾಡಪತ್ರಿ ಗಳನ್ನು ಸೋಮವಾರದಂದು ಚೀಟಿ ಎತ್ತುವ ಮೂಲಕ ನೀಡಲಾಗುವುದು, ಇನ್ನು ಹೆಚ್ಚುವರಿಯಾಗಿ ಮೇಲಾಧಿಕಾರಿಗಳಿಗೆ ತಿಳಿಸಿ, ನೀಡಲಾಗುವುದು ಎಂದು ಮನವಿ ಮಾಡಿಕೊಂಡರು. ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂತೆಗೆದುಕೊಂಡರು.

ಈ ಸಂಧರ್ಭದಲ್ಲಿ ಶಿವಪುತ್ರಪ್ಪಾ ಕೆಳಗೇರಿ, ರಮೇಶ್ ಮಲ್ಲದಾಸರ, ರಾಜು ದೊಡ್ಡಮನಿ, ರವಿ ದೊಡ್ಡಮನಿ, ಹಣಮಂತ ತಳವಾರ, ಮಾಂತೇಶ ದೊಡ್ಡಮನಿ, ಶಿವು ಛಲವಾದಿ, ನೀಲಪ್ಪ ಜಕ್ಕಪ್ಪನವರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

28/08/2021 07:13 pm

Cinque Terre

27.36 K

Cinque Terre

0

ಸಂಬಂಧಿತ ಸುದ್ದಿ