ಕುಂದಗೋಳ : ತಾಲೂಕಿನ ಹಿರೇಹರಕುಣಿ ಗ್ರಾಮದ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ವಡಗೇರಿ ದಾರಿ ದುರಸ್ತಿ ಕಾಣದ ಪರಿಣಾಮ ರೈತಾಪಿ ಚಟುವಟಿಕೆಗಳಿಗೆ ಎಲ್ಲಿಲ್ಲದ ತೊಂದರೆ ಎದುರಾಗಿ ರೈತರು ನಿತ್ಯವು ಹರಸಾಹಸ ಮಾಡಿ ತಮ್ಮ ಕಾಯಕಕ್ಕೆ ತೆರಳಬೇಕಾಗಿದೆ.
ಈ ವಡಗೇರಿ ದಾರಿಯಲ್ಲಿ ರೈತರು ಟ್ರ್ಯಾಕ್ಟರ್ ಟೇಲರ್ ತೆಗೆದುಕೊಂಡು ಹೊಲಕ್ಕೆ ಹೋಗುವಾಗ ರಾಡಿಯಲ್ಲಿ ಸಿಲುಕಿ ಹಾಕಿಕೊಂಡ ಟೇಲರ್ ಮೇಲೆಳೆದ ಕಳೆದೆರಡು ತಿಂಗಳಿಂದ ಟೇಲರ್ ಅಲ್ಲಿಯೇ ಉಳಿದಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಕೇವಲ ನಾಲ್ಕು ಕಿಲೋ ಮೀಟರ್ ರಸ್ತೆ ಸರಿಮಾಡಿಸಿ ಎನ್ನುವ ಮನವಿಗೆ ಸ್ಪಂದಿಸಬೇಕಾಗಿದೆ. ಆದ್ರೆ ಇಲ್ಲಿರುವ ನಿಶಕಾಳಜಿ ಪಂಚಾಯಿತಿ ಅಧಿಕಾರಿಗಳು,ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
27/10/2020 12:35 pm