ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್........
ಹುಬ್ಬಳ್ಳಿ: ಪಾದಚಾರಿಗಳಿಗೆ ಪುಟ್ ಪಾತ ಇದ್ದು ಇಲ್ಲದಂತಾದ ಸಮಯದಲ್ಲಿ, ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾರ್ವಜನಿಕರ ಹಿತದೃಷ್ಟಿಯಿಂದ, ಪುಟ್ ಪಾತ್ ಗೆ ಬ್ಯಾರಿಕೇಡ್ ನ್ನು ಹಾಕಿದ ಸುದ್ದಿಯನ್ನು ಬಿತ್ತರಿಸಿತ್ತು. ಸುದ್ದಿಯನ್ನು ನೋಡಿದ ಪೊಲೀಸ್ ಸಿಬ್ಬಂದಿ ಆ ಬ್ಯಾರಿಕೇಡ್ ನ್ನು ತೆಗೆದು ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿದ್ದಾರೆ....
ಉಪನಗರ ಪೊಲೀಸ್ ಠಾಣೆಯ ಬಳಿ ಪಾದಚಾರಿ ಮಾರ್ಗಕ್ಕೆ ಬ್ಯಾರಿಕೇಡ್ ಹಾಕಿ,ಜನ ಸಂಚಾರಕ್ಕೆ ಅಡ್ಡಿ ಮಾಡಿದ್ದರು. ಹೀಗಾಗಿ ಜನರು ಅನಿವಾರ್ಯವಾಗಿ ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ರಸ್ತೆಯಲ್ಲಿಯೇ ಓಡಾಡುವಂತಾದ ಪರಿಸ್ಥಿತಿ ಎದುರಾಗಿತ್ತು. ಈ ಕುರಿತು ನಿಮ್ಮ ಪಬ್ಲಿಕ್ ಪುಟಪಾತ್ ಗೆ ಬ್ಯಾರಿಕೇಡ್ ಹಾಕಿದ ಪೊಲೀಸ್ ಸಿಬ್ಬಂದಿ! ಸಾರ್ವಜನಿಕರು ನಡೆದಾಡುವುದಾದರು ಎಲ್ಲಿ? ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿಯನ್ನು ಬಿತ್ತರಿಸಿತ್ತು. ಸುದ್ದಿಯನ್ನು ನೋಡಿದ ಪೊಲೀಸ್ ಅಧಿಕಾರಗಳು ಕೂಡಲೆ ಪಾದಚಾರಿ ಮಾರ್ಗೆಕ್ಕೆ ಹಾಕಿದ, ಬ್ಯಾರಿಕೇಡ್ ನ್ನು ತೆಗೆದು ಸಾರ್ವಜನಿಕರು ನಡೆದಾಡಲು ಮಾರ್ಗ ಬಿಟ್ಟಿದ್ದಾರೆ....
ಒಟ್ಟಿನಲ್ಲಿ ಪಾದಾಚಾರಿಗಳಿಗೆ ತಾವೇ ಅಡ್ಡಿ ಮಾಡಿದ ಪೊಲೀಸ್ ಸಿಬ್ಬಂದಿ, ವರದಿಯನ್ನು ನೋಡಿದ ನಂತರ ಈಗ ಜನ ಸಂಚಾರಕ್ಕೆ ಅನುವು ಮಾಡಿದ್ದಾರೆ. ಈ ಕುರಿತು ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಅಭಿನಂದನೆ ಸಲ್ಲಿಸಿದ್ದಾರೆ.......
Kshetra Samachara
27/10/2020 11:53 am