ಹುಬ್ಬಳ್ಳಿ : ಅದು ಅವಳಿನಗರದ ಮಹತ್ವಪೂರ್ಣ ಯೋಜನೆ ಲಾಕ್ ಡೌನ್ ಸಂದರ್ಭದಲ್ಲಿ ಕೊಂಚಮಟ್ಟಿಗೆ ನಿಧಾನಗತಿಯಲ್ಲಿ ಸಾಗುತ್ತಿದ್ದ ಆ ಯೋಜನೆ ಈಗ ಸಾರ್ವಜನಿಕ ಸೇವೆಗೆ ಸಿದ್ದಗೊಂಡಿದೆ.
ಹು-ಧಾ ಮಹಾನಗರ ಬಹುನಿರೀಕ್ಷಿತ ಯೋಜನೆ ಅಂದುಕೊಂಡಂತೆ ಸಿದ್ದಗೊಂಡಿದ್ದು,ಕಾರ್ಯಾರಂಭ ಮಾಡಿದೆ.ಯಾವುದು ಈ ಯೋಜನೆ ಅಂತೀರಾ ಈ ಸ್ಟೋರಿ ನೋಡಿ.
ಇಲ್ಲಿರುವ ರೈಲ್ವೆ ಟ್ರ್ಯಾಕ್ ಗಳನ್ನೊಮ್ಮೆ ನೋಡಿ ಮೊದಲು ಸಿಂಗಲ್ ಆಗಿದ್ದ ರೈಲ್ವೆ ಟ್ರ್ಯಾಕ್ ಗಳು ಈಗ ಜೋಡಿಯಾಗಿ ಕಂಗೊಳಿಸುತ್ತಿವೆ.
ಪ್ರಯಾಣಿಕರಿಗೆ ಕ್ರಾಸಿಂಗ್ ಸಂದರ್ಭದಲ್ಲಿ ಗಂಟೆಗಟ್ಟಲೆ ಕಾಯುವಂತ ಪರಿಸ್ಥಿತಿ ನಿರಾಳವಾಗಿದ್ದು,ಹು-ಧಾ ಮಹಾನಗರದ ಮಹತ್ವಪೂರ್ಣ ಯೋಜನೆಯಲ್ಲಿ ನೈಋತ್ಯ ರೈಲ್ವೆ ವಲಯ ತನ್ನ ಕಾರ್ಯದಕ್ಷತೆಯನ್ನು ಮೆರೆಯುವ ಮೂಲಕ ಡಬ್ಲಿಂಗ್ ಕಾರ್ಯವನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಟ್ಟಿದೆ.
ಹೌದು ನೈಋತ್ಯ ರೈಲ್ವೆ ವಲಯದ ಧಾರವಾಡ–ಉಣಕಲ್ ನಡುವಿನ 16.64 ಕಿ.ಮೀ. ಅಂತರದ ಜೋಡಿ ರೈಲು ಮಾರ್ಗ(ಡಬ್ಲಿಂಗ್) ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ರೈಲುಗಳ ಸಂಚಾರವೂ ಆರಂಭವಾಗಿದ್ದು,ಬಹಳ ದಿನಗಳಿಂದ ಉಳಿದುಕೊಂಡಿದ್ದ ಕನಸು ಈಗ ನನಸಾಗಿದೆ.
ರೈಲ್ವೆ ವಿಕಾಸ್ ನಿಗಮ ನಿಯಮಿತ (ಆರ್ವಿಎನ್ಎಲ್) ನಿರ್ವಹಿಸುತ್ತಿರುವ ಈ ಕಾಮಗಾರಿಯು ಹೊಸಪೇಟೆ– ತಿನೈಘಾಟ್– ವಾಸ್ಕೋಡಗಾಮ ನಡುವಿನ 374 ಕಿ.ಮೀ. ಜೋಡಿ ಮಾರ್ಗದ ಭಾಗವಾಗಿದೆ.
ಇನ್ನುಳಿದ ಉಣಕಲ್–ಹುಬ್ಬಳ್ಳಿ ರೈಲ್ವೆ ನಿಲ್ದಾಣದ ನಡುವಿನ ನಾಲ್ಕು ಕಿ.ಮೀ. ಅಂತರದ ಜೋಡಿ ಮಾರ್ಗ ಕಾರ್ಯ ಈಗಾಗಲೇ ಆರಂಭವಾಗಿದ್ದು, 2021ರ ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ.
ಧಾರವಾಡ, ನವಲೂರು ಮತ್ತು ಹುಬ್ಬಳ್ಳಿ ಪಶ್ಚಿಮ ಬೈ ಪಾಸ್ ಕ್ಯಾಬಿನ್ನಲ್ಲಿ ಸಿಗ್ನಲ್ ವ್ಯವಸ್ಥೆ ಕಲ್ಪಿಸಲಾಗಿದೆ. ನವಲೂರು ಯಾರ್ಡ್ನಲ್ಲಿ ಸರಕು ಸಾಗಣೆಗಳ ವಾಹನಗಳ ಸಾಗಾಟಕ್ಕೆ ಹೆಚ್ಚುವರಿಯಾಗಿ ಮೂರು ಲೈನ್ಗಳನ್ನು ನಿರ್ಮಿಸಲಾಗಿದೆ. ಮೊದಲು ಮೂರು ಲೈನ್ಗಳಷ್ಟೇ ಇದ್ದವು.
ಧಾರವಾಡ–ಉಣಕಲ್ ಜೋಡಿ ಮಾರ್ಗಕ್ಕೆ ಅಂದಾಜು 133.8 ಕೋಟಿ ವೆಚ್ಚವಾಗಿದ್ದು, ಉಣಕಲ್ ಮತ್ತು ನವಲೂರು ಬಳಿ ನಡೆದುಕೊಂಡು ಹೋಗಲು ಕಿರು ಸೇತುವೆಗಳನ್ನು ನಿರ್ಮಿಸಲಾಗಿದೆ.
ಜೋಡಿ ರೈಲು ಮಾರ್ಗದಿಂದ ಪ್ರಯಾಣಿಕರ ರೈಲಿಗೆ ಮಾತ್ರವಲ್ಲದೆ ಸರಕು ಸಾಗಾಟದ ರೈಲು ಕೂಡ ನಿಗದಿತ ಸಮಯಕ್ಕೆ ಕಾರ್ಯಪೂರ್ಣಿಸುವ ಸಾಧ್ಯತೆ ಹೆಚ್ಚಾಗಿದ್ದು,ಸಮಯಕ್ಕೆ ನೈಋತ್ಯ ರೈಲ್ವೆ ವಲಯ ಹೆಚ್ಚಿನ ಒತ್ತನ್ನು ನೀಡಿರುವುದು ವಿಶೇಷವಾಗಿದೆ.
Kshetra Samachara
23/10/2020 11:19 am