ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಚಾಕಲಬ್ಬಿ ಗ್ರಾಮದ ರಸ್ತೆ ಥೇಟ್ ಚರಂಡಿಯಾಗಿ ಮಾರ್ಪಟ್ಟಿದೆ

ಕುಂದಗೋಳ : ತಾಲೂಕಿನ ಹಳ್ಳಿಗಳ ಅವ್ಯವಸ್ಥೆ ಪಟ್ಟಿ ವಿಸ್ತಾರಗೊಳ್ಳುತ್ತಿದೆ ಹೊರತು ಅಭಿವೃದ್ಧಿಯಾಗುತ್ತಿಲ್ಲ ನೋಡಿ ಇಲ್ಲಿ ರಸ್ತೆಯುದ್ದಕ್ಕೂ ಹೀಗೆ ಗುಂಡಿ ಅದರೊಳಗೆ ಸಂಗ್ರಹವಾಗಿರೋ ಕೊಳಚೆ ನೀರು ತುಂಬಿಕೊಂಡಿರುವ ರಸ್ತೆ ಸಂಶಿ ಗ್ರಾಮದಿಂದ ಚಾಕಲಬ್ಬಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಕಾಣದೆ ಸಂಚಾರಕ್ಕೆ ಮಾರಕವಾಗಿದೆ.

ಸಂಶಿಯಿಂದ 8 ಕಿ.ಮೀ ದೂರದ ಚಾಕಲಬ್ಬಿಗೆ ನಿತ್ಯ ಕಚೇರಿ ವಹಿವಾಟು ಬ್ಯಾಂಕ್ ಇತರೆ ಕೆಲಸಕ್ಕೆ ಹೋಗುವ ಜನರಿಗೆ ತೊಂದರೆ ಉಂಟಾಗಿದ್ದು ಈ ರಸ್ತೆ ಸಂಭವಿಸಿದ ಅಪಘಾತ ಬಿದ್ದು ಎದ್ದು ಹೋದ ವಯೋವೃದ್ಧರಿಗೆ ಲೆಕ್ಕವಿಲ್ಲಾ ಈ ಕುರಿತು ಜನಪ್ರತಿನಿಧಿಗಳು ಮನವಿ ಸಲ್ಲಿಸಿದರು ಪ್ರಯೋಜನ ಸಿಕ್ಕಿಲ್ಲ ಇನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಾಣ ಕುರುಡರಂತೆ ಸುಮ್ಮನೆ ಕುಳಿತಿದ್ದು ರಸ್ತೆ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

22/10/2020 02:59 pm

Cinque Terre

23.75 K

Cinque Terre

1

ಸಂಬಂಧಿತ ಸುದ್ದಿ