ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಕೊರೊನಾ ಹೊಡೆತಕ್ಕೆ ನಲುಗಿದ ಅದೆಷ್ಟೋ ಜನರಿಗೆ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿ ಜಿಲ್ಲೆಯಲ್ಲೇ ಕುಂದಗೋಳ ತಾಲೂಕು ಆಸ್ಪತ್ರೆ ಸೈ ಎನಿಸಿಕೊಂಡಿದ್ದು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಪಣತೊಟ್ಟಿದ್ದ 8 ಜನ ವೈದ್ಯಾಧಿಕಾರಿಗಳು 22 ಜನ ವೈದ್ಯಕೀಯ ಸಿಬ್ಬಂದಿಗಳು ಕೊರೊನಾ ಇಡಾಗೀ ಮರಳಿ ಚೇತರಿಕೆ ಕಂಡು ಕರ್ತವ್ಯಕ್ಕೆ ಹಾಜರಾಗಿರುವುದು ಹೆಮ್ಮೆಯ ವಿಶೇಷ.
ಆದ್ರೆ ಈ ತಾಲೂಕು ಆಸ್ಪತ್ರೆಯಲ್ಲಿ ನಿರ್ವಾಹಣಾ ಸಿಬ್ಬಂದಿಗಳು ಕೊರತೆ ಇದ್ದು ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಭಾಗೀರಥಿಯವರು ಸಮಸ್ಯೆಯನ್ನ ಮೇಲಾಧಿಕಾರಿಗಳ ಗಮನಕ್ಕೆ ತಂದು ಸುಸ್ತಾಗಿದ್ದು ಬರೋಬ್ಬರಿ 100 ಬೆಡ್ ಹೊಂದಿರುವ ಈ ಆಸ್ಪತ್ರೆಗೆ 30 'ಡಿ' ದರ್ಜೆಯ ನಿರ್ವಹಣಾ ಸಿಬ್ಬಂದಿ ಅಗತ್ಯವಿದ್ದು ಸದ್ಯ ಕೇವಲ 8 ಜನರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಪರಿಣಾಮ ಸರ್ಕಾರಿ ಆಸ್ಪತ್ರೆ ಕಸ ವಿಲೇವಾರಿ ಸ್ವಚ್ಚತೆ ದೂರ ಉಳಿದಿದ್ದು ಎಲ್ಲೇಂದರಲ್ಲಿ ಬಳಸಿ ಬಿಸಾಡಿದ ಮಾಸ್ಕ್, ಬಕೆಟ್ ತುಂಬಿದರೂ ನಿರ್ವಹಣೆ ಕಾಣದ ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್, ಇಂಜೆಕ್ಷನ್ ಟ್ಯಾಬ್ಲೆಟ್ ಕವರ್ ಬಿದ್ದಿದ್ದೂ ಇದಲ್ಲದೆ ಶೌಚಾಲಯದ ಅನೈರ್ಮಲ್ಯ ಹಾಗೂ ಸರ್ಕಾರಿ ಆಸ್ಪತ್ರೆ ನಾಗರೀಕ ಸೌಲಭ್ಯಗಳ ಸಂಕೀರ್ಣ ಕಟ್ಟಡದ ಹಿಂದೆ ಸತ್ತ ಪ್ರಾಣಿಯ ಎಲುಬುಗಳು ಪತ್ತೆಯಾಗಿದ್ದು ಈ ವ್ಯವಸ್ಥೆ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ವೈದ್ಯಾಧಿಕಾರಿ ಸಿಬ್ಬಂದಿಗಳಿಗೂ ತಲೆ ನೋವಾಗಿ ಪರಿಣಮಿಸಿದೆ.
ಈ ತಾಲೂಕು ಆಸ್ಪತ್ರೆಯೂ ಕೊರೊನಾ ನಿವಾರಣೆ, ಹಾಗೂ ಹಳ್ಳಿಗರಿಗೆ ಸೂಕ್ತ ಚಿಕಿತ್ಸೆ ನೀಡಿ ಹೆಮ್ಮೆಯ ಗರಿ ಹೊತ್ತಿದ್ದು ಸ್ವಚ್ಚತೆಯಲ್ಲೂ ಪ್ರಾಮುಖ್ಯತೆ ನೀಡಲು ಮೇಲಾಧಿಕಾರಿಗಳು ಮುಂದಾಗಬೇಕಿದೆ.
Kshetra Samachara
16/10/2020 06:46 pm