ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಡುಗಿಗಾಗಿ ಹಾಡುಹಗಲೇ ಮಾರಕಾಸ್ತ್ರ ಹಿಡಿದು ಯುವಕರ ಫೈಟ್: ವಿಡಿಯೋ ವೈರಲ್

ಹುಬ್ಬಳ್ಳಿ: ಹುಡುಗಿಯ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಗುಂಪೊಂದು ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹೊಡೆದಾಡಿದ ವಿಡಿಯೋ ಈಗ ವೈರಲ್ ಆಗಿದೆ.

ಹುಬ್ಬಳ್ಳಿಯ ದೇವಾಂಗಪೇಟೆ ಸ್ಮಶಾನದ ಬಳಿ ಸೆಪ್ಟೆಂಬರ್ 18 ರಂದು ಯುವತಿ ವಿಚಾರಕ್ಕೆ ಎರಡು ಗುಂಪಿನ ಯುವಕರ ನಡುವೇ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಹಾಡಹಗಲೇ ಯುವಕರ ಗುಂಪು ಹೊಡೆದಾಡಿಕೊಂಡಿದೆ.

ಯುವಕರ ಹೊಡೆದಾಟದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ ನಡೆದಿತ್ತು. ಹೊಡೆದಾಟದಲ್ಲಿ ಕಾರ್ತಿಕ್ ಹಾಗೂ ನಾಗರಾಜ್ ನ ಕುತ್ತಿಗೆ ಮತ್ತು ಎದೆಗೆ ಪೆಟ್ಟಾಗಿತ್ತು. ಎದುರಾಳಿ ಶುಭಂ, ವರುಣ್ ಹಾಗೂ ಸಂಪತ್ ಮೇಲೆ ದೂರು ದಾಖಲಾಗಿತ್ತು. ಸದ್ಯ ಗಾಯಾಳು ಕಾರ್ತಿಕ್, ನಾಗರಾಜ್, ಹಾಗೂ ಸಿದ್ದು ಎಂಬ ಯುವಕರ ಮೇಲೆ ಪ್ರತಿದೂರು ದಾಖಲಾಗಿದೆ.

ಯುವಕರು ಹೊಡೆದಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದ್ದು, ಯುವತಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ರೋಡ ಫೈಟ್ ನಡೆದಿದ್ದು, ಯುವಕರಿಗೆ ಪೊಲೀಸರ ಭಯವೇ ಇಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Edited By : Somashekar
Kshetra Samachara

Kshetra Samachara

21/09/2022 02:09 pm

Cinque Terre

36.22 K

Cinque Terre

6

ಸಂಬಂಧಿತ ಸುದ್ದಿ