ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯುಗಾದಿಗೆ ಬರುವೆನೆಂದಿದ್ದ ಅಪ್ಪ; ಆದರೆ, ಬಂದೆರಗಿದ್ದುʼಬರಸಿಡಿಲು!ʼ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಮಲ್ಲೇಶ್ ಸೂರಣಗಿ

ಹುಬ್ಬಳ್ಳಿ: ಆ ಮನೆಯಲ್ಲಿ ಯುಗಾದಿ ಸಂಭ್ರಮ... ಮನೆಮಂದಿಯೆಲ್ಲ ಚೆನ್ನಾಗಿ ಹಬ್ಬ ಆಚರಿಸಬೇಕು ಅಂದುಕೊಂಡಿದ್ದರು. ಆದರೆ, ಆ ಒಂದು ಘಟನೆ ಆ ಮನೆಯ ಸಂತೋಷವನ್ನೇ ಕಿತ್ತುಕೊಂಡಿದೆ. ಅಲ್ಲಿ ಆಗಿದ್ದಾದರೂ ಏನು ? ಅವರಿಗೆ ಬಂದ ಕಷ್ಟವಾದರೂ ಏನು? ಇಲ್ಲಿದೆ ಆ ಮನಕಲಕುವ ಕಹಾನಿ.

ನಾಲ್ವರು ಮಕ್ಕಳನ್ನು ಸಾಕುತ್ತಿದ್ದಾರೆ ಆ ತಾಯಿ. ಈ ಹೆಣ್ಣುಜೀವದ ಜೀವನದಲ್ಲಿ ಬಹುದೊಡ್ಡ ಆಘಾತವೇ ನಡೆದು ಹೋಗಿದೆ. ಹೌದು.. ಏ.1ರಂದು ಧಾರವಾಡದಲ್ಲಿ ನಡೆದ ಅಪಘಾತದಲ್ಲಿ ಮನೆಗೆ ಆಧಾರವಾಗಿದ್ದ ಯಜಮಾನ ಸಾವನ್ನಪ್ಪಿದ್ದಾನೆ. ಅಪ್ಪನ ಅಗಲಿಕೆಯಿಂದ ಮಕ್ಕಳು ತಬ್ಬಲಿಯಾಗಿದ್ದಾರೆ. ಯುಗಾದಿ ಸಂಭ್ರಮದಲ್ಲಿದ್ದ ಮಕ್ಕಳು ತಂದೆಯ ಬರುವಿಕೆ ಎದುರು ನೋಡುತ್ತಿದ್ದರು. ಆದರೆ, ಅಪ್ಪ ಬಂದಿದ್ದು ಮಾತ್ರ ಹೆಣವಾಗಿ. ಹೌದು, ಅಪಘಾತದಲ್ಲಿ ಶಿವಪುತ್ರಪ್ಪ ಹೊಸಪೇಟೆ ತೀರಿಕೊಂಡಿದ್ದರು!

ಇನ್ನು, ನಾಲ್ವರು ಹೆಣ್ಣುಮಕ್ಕಳನ್ನು ಒಡಲಲ್ಲಿ ಕಟ್ಟಿಕೊಂಡು ಈ ಅಮ್ಮ ಜೀವನ ನಡೆಸಬೇಕಿದೆ. ಸಾಲ ಮಾಡಿ ಶಿವಪುತ್ರಪ್ಪ ಮನೆ ಕಟ್ಟಿಸಿದ್ದು, ಸಾಲದ ಹೊರೆ ಒಂದು ಕಡೆ, ಮಕ್ಕಳ ಹಾಗೂ ಮನೆ ನಿರ್ವಹಣೆ ಮತ್ತೊಂದೆಡೆಯಾಗಿದೆ. ನಾಲ್ಕು ಮಂದಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿ ಬಾಳಬಂಡಿ ಮುನ್ನಡೆಸುವುದೇ ಈ ತಾಯಿಯ ಮುಂದಿರುವ ಬಹುದೊಡ್ಡ ಸವಾಲು.

ಒಟ್ಟಿನಲ್ಲಿ ಆ ಒಂದು ಅಪಘಾತ ಈ ಕುಟುಂಬದ ಖುಷಿ ಕಿತ್ತುಕೊಂಡಿದೆ. ಸರ್ಕಾರ, ಜನಪ್ರತಿನಿಧಿಗಳು ಈ ಬಡ ಕುಟುಂಬಕ್ಕೆ ನೆರವು ನೀಡಿ ಕಣ್ಣೀರು ಒರೆಸಬೇಕಿದೆ. ಸಹೃದಯಿಗಳು ಈ ಅಕೌಂಟ್ ನಂಬರ್ ಗೆ ಹಣ ಸಂದಾಯ ಮಾಡಬಹುದು.

ಮಂಜುಳಾ ಹೊಸಪೇಟೆ, ಬ್ಯಾಂಕ್ ಆಫ್ ಬರೋಡಾ

ಅಕೌಂಟ್ ನಂ. 74450100002927

Ifsc-BARBOVJNADH

- ಮಲ್ಲೇಶ್ ಸೂರಣಗಿ, ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/04/2022 08:44 pm

Cinque Terre

119.49 K

Cinque Terre

12

ಸಂಬಂಧಿತ ಸುದ್ದಿ