ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ದೇವರು ಜನ್ಮತಃ ದೇಹದಲ್ಲಿ ಏನನ್ನಾದರೂ ಕೊರತೆ ಮಾಡಿದ್ದರೆ ಪರ್ಯಾಯವಾಗಿ ಅದ್ಭುತ ಶಕ್ತಿ ಅಥವಾ ಕಲೆಯನ್ನು ಉಡುಗೊರೆಯಾಗಿ ನೀಡುತ್ತಾನೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ಹುಟ್ಟುತ್ತಲೆ ಶ್ರವಣ ಮಾಂದ್ಯತೆ, ಮಾತೂ ಬಾರದು ಎಂದು ಬೇರೆ ಹೇಳಲೇ ಬೇಕಾಗಿಲ್ಲ. ಆದರೆ ಈ ಹುಡುಗಿಯ ಸಾಧನೆ ಏನು ಕಮ್ಮಿ ಇಲ್ಲಾ.ಎಂತಹ ಕಷ್ಟ ಬಂದರೂ ಸಾಧನೆಯ ಮೇಟ್ಟಿಲ್ಲು ಏರಬಹುದು ಎನ್ನುವುದಕ್ಕೆ ಹುಬ್ಬಳ್ಳಿಯ ಈ ಪೋರಿಯೇ ಉದಾಹರಣೆ. ಅದು ಯಾರು ಅಂತೀರಾ..? ಈ ಸ್ಟೋರಿ ನೋಡಿ.
ಭರತನಾಟ್ಯದಲ್ಲಿ ತನ್ನದೇ ಛಾಪುನ್ನ ಮೂಡಿಸುತ್ತಿರುವ ಈ ಹುಡುಗಿಯ ಹೆಸರು ವೈಭವಿ. ಈಕೆಯ ನೃತ್ಯ ಕಲೆಯ ವೈಭವನ್ನು ನೋಡಿಯೇ ಆನಂದಿಸಬೇಕು. ಹುಬ್ಬಳ್ಳಿಯ ವಿಕಾಸ ನಗರದ ನಿವಾಸಿ ಶ್ರೀಮತಿ ವರ್ಷಾ ಹಾಗೂ ವೆಂಕಟೇಶ ಕುಲಕರ್ಣಿ ದಂಪತಿಯ ಪ್ರೀತಿಯ ಪುತ್ರಿ ಈ ವೈಭವಿ. ಇವಳ ಶ್ರವಣ ನ್ಯೂನ್ಯತೆಯನ್ನು ಲೆಕ್ಕಿಸಿದೇ ಪೋಷಕರು ಭರತನಾಟ್ಯ ಪ್ರವೀಣೆ ಮಾಡಲು ಮುಂದಾಗಿದ್ದಾರೆ.
ಹೆಮ್ಮೆ ವಿಷಯವೆಂದರೆ ಈಕೆ ಇದೇ ಎಪ್ರಿಲ್ 21 ಕ್ಕೆ ನಾಗಪುರದಲ್ಲಿ ನಡೆಯಲಿರುವ ಇಂಟರ್‌ನ್ಯಾಷನಲ್ ವರ್ಲ್ಡ್ ಡ್ಯಾನ್ಸರ್ ಒಲಿಂಪಿಕ್ಸ್ ಗೆ ಆಯ್ಕೆ ಆಗಿದ್ದಾಳೆ. ಅಷ್ಟೇ ಅಲ್ಲದೇ ಕನ್ನಡ ಖಾಸಗಿ ವಾಹಿನಿಯ ಡಾನ್ಸ್ ರಿಯಾಲಿಟಿ ಶೋಗೆ ಆಡಿಷನ್ ನೀಡಿದ್ದಾಳೆ. ಹಾಗೆಯೆ ಆಯ್ಕೆ ಆಗಲಿ ಎನ್ನುವುದೂ ಪಬ್ಲಿಕ್ ನೆಕ್ಸ್ಟ್ ಓದುಗರ ಆಶಯ. ವೈಭವಿ ಸಾಧನೆಗೆ ಪೋಷಕರಲ್ಲಿ ಎಲ್ಲಿಲ್ಲದ ಸಂತಸ ಮೂಡಿಸಿದೆ.
ಈಚೆಗೆ ನಾಗಪುರ ದಲ್ಲಿ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಾಚಿಕೊಂಡು ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಹಾಗೆಯೇ ರಾಜ್ಯ ಮಟ್ಟದ ಬೆಳಗಾವಿ, ಮೈಸೂರದಲ್ಲಿ ಕೂಡಾ ಅವರದೇ ಆದ ಸ್ಥಾನವನ್ನು ಪಡೆದುಕೊಂಡು ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಕೇವಲ ಹಾವಭಾವದಿಂದ ತರಬೇತಿ ಪಡೆಯುತ್ತಿರುವ ವೈಭವಿಯಂತ ಶಿಷ್ಯೆಗೆ ಕಲಿಸಲು ಖುಷಿಯಾಗುತ್ತದೆ ಎನ್ನುತ್ತಾರೆ ನೃತ್ಯ ಗುರುಗಳಾದ ಕೀರ್ತಿ ಅವರು.
ಹುಬ್ಬಳ್ಳಿಯ ರೋಟರಿ ಕನ್ನಡ ಮಾಧ್ಯಮದಲ್ಲಿ ವೈಭವಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮಗಳ ಏಳಿಗೆಗಾಗಿಯೇ ಪೋಷಕರು ಬೆನ್ನೆಲುಬಾಗಿ ನಿಂತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/03/2022 07:47 pm