ಕುಂದಗೋಳ : ಮಾನವೀಯತೆ ಎಲ್ಲೋ ಮರೆಯಾಗಿಲ್ಲ ಮಾನವೀಯತೆ ನಮ್ಮಲ್ಲೇ ಇದೆ ಎನ್ನುವಂತಹ ಮಹತ್ವದ ಕಾರ್ಯವನ್ನು ಕುಂದಗೋಳ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ನಾಗರೀಕರು ಮಾಡಿ ಜನರಿಂದ ಸೈ ಎನಿಸಿಕೊಂಡಿದ್ದಾರೆ.
ಹೌದು ! ಕುಂದಗೋಳ ಪಟ್ಟಣದಲ್ಲಿ ಬಹುದಿನಗಳಿಂದ ವಾಸವಿದ್ದ ನಿರ್ಗತಿಕರನೊಬ್ಬನಿಗೆ ನಿನ್ನೆ ಅಪರಿಚಿತ ವಾಹನ ತಾಗಿದ ಪರಿಣಾಮ ಭುಜಕ್ಕೆ ಗಾಯವಾಗಿದೆ, ಈ ವಿಷಯ ತಿಳಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಸರಿಯಾದ ಚಿಕಿತ್ಸೆ ಜೊತೆ ನಿರ್ಗತಿಕ ವೃದ್ಧನಿಗೆ ಕ್ಷೌರದ ಜೊತೆ ಸ್ನಾನ ಮಾಡಿಸಿ ಹೊಸ ಬಟ್ಟೆ ಕೊಡಿಸಿ ಊಟ ಹ್ಗೂ ಮಲಗಲು ಹಾಸಿಗೆ ನೀಡಿದ್ದಾರೆ.
ಸಧ್ಯ ನಿರ್ಗತಿಕ ವೃದ್ಧ ಕುಂದಗೋಳ ಬಸ್ ನಿಲ್ದಾಣದಲ್ಲಿ ವಾಸವಿದ್ದು ನಾಳೆ ನಿರ್ಗತಿಕ ಕೇಂದ್ರಕ್ಕೆ ರವಾನಿಸುವ ಇಂಗಿತ ವ್ಯಕ್ತಪಡಿಸಿದ ಆಸ್ಪತ್ರೆ ಸಿಬ್ಬಂದಿ ನಾಗರೀಕರು ಆ ನಿಟ್ಟಿನಲ್ಲಿ ನಿರ್ಗತಿಕ ಕೇಂದ್ರ ಸಂಪರ್ಕಿಸಿ ವೃದ್ಧನಿಗೆ ಶಾಶ್ವತ ಸೂರು ಕಲ್ಪಿಸಲು ಸಿದ್ಧತೆ ಮಾಡಿದ್ದಾರೆ.
Kshetra Samachara
06/10/2021 05:24 pm