ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಕಳನ್ನು ರಕ್ಷಣೆ ಮಾಡಿದ ಎಂ.ಆರ್.ಹಾತರಕಿ ಆ್ಯಂಡ್ ಟೀಮ್...!

ಹುಬ್ಬಳ್ಳಿ: ತಿಪ್ಪೆಗುಂಡಿಯಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದ ಆಕಳನ್ನು ಅಮರಗೋಳದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.

ಮಳೆಯಿಂದ ಕೊಳೆತು ಹೋಗಿದ್ದ ತಿಪ್ಪೆಯಲ್ಲಿ ಆಹಾರ ಹುಡುಕಿಕೊಂಡು ಹೋಗಿದ್ದ ಆಕಳು ಹುಬ್ಬಳ್ಳಿಯ ಗೋಪನಕೊಪ್ಪದ ಬಳಿಯಲ್ಲಿ ಸಿಲುಕಿಕೊಂಡಿದೆ‌. ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಠಾಣಾಧಿಕಾರಿ ಎಂ.ಆರ್.ಹಾತರಕಿ ಹಾಗೂ ಸಿಬ್ಬಂದಿ ಆಕಳನ್ನು ರಕ್ಷಣೆ ಮಾಡಿದ್ದಾರೆ.

ಇನ್ನೂ ಯಶಸ್ವಿ ಕಾರ್ಯಾಚರಣೆ ಮೂಲಕ ಆಕಳನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

Edited By : Shivu K
Kshetra Samachara

Kshetra Samachara

30/07/2021 01:46 pm

Cinque Terre

51.47 K

Cinque Terre

5

ಸಂಬಂಧಿತ ಸುದ್ದಿ