ವರದಿ:ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ:ತಾಲೂಕಿನ ವೃದ್ಧರೊಬ್ಬರು ಕಳೆದ ಇಪ್ಪತ್ತೊಂದು ವರ್ಷಗಳ ಬಳಿಕ ಮರಳಿ ತಮ್ಮ ಕುಟುಂಬವನ್ನು ಸೇರಿಕೊಂಡಿರುವ ಅಪರೂಪದ ಘಟನೆ ಜರುಗಿದ್ದು,ಇದು ಪಬ್ಲಿಕ್ ನೆಕ್ಸ್ಟ್ ವರದಿ ಫಲಶೃುತಿಯಾಗಿದೆ.
ಕಲಘಟಗಿ ಪಟ್ಟಣದ ಗಾಂಧಿನಗರದ ಅನಕ್ಷರಸ್ಥರಾಗಿರುವ ಕೆಂಚಪ್ಪ (ಆನಂದಪ್ಪ ) ವಡ್ಡರ ಎಂಬ ವೃದ್ಧ ಕೂಲಿ ಕೆಲಸಕ್ಕಾಗಿ ಮನೆ ತೊರೆದು,ರೈಲು ಹತ್ತಿ ಅಲ್ಲಿ ಇಲ್ಲಿ ಅಲೆದು
ಇಪ್ಪತ್ತೊಂದು ವರ್ಷಗಳಿಂದ ಮರಳಿ ಬರಲಾಗದೇ
ಉತ್ತರಕಾಂಡದಲ್ಲಿ ವಾಸವಾಗಿದ್ದರು.
ಅಲ್ಲಿ ಐ ಟಿ ಬಿ ಪಿಯಲ್ಲಿ ದೇಶ ಸೇವೆ ಸಲ್ಲಿಸುತ್ತಿರುವ ರಿಯಾಝ್ ಸುಂಕದ ಮತ್ತು ಶರಣಬಸವ ಗದಗ ಅವರು ಹೊಟೇಲ್ ನಲ್ಲಿ ಕೆಲಸಕ್ಕೆ ಇದ್ದ,ಕನ್ನಡ ಮಾತನಾಡುವ ಅಜ್ಜನ ಪರಿಚಯ ಮಾಡಿಕೊಂಡು ಕಲಘಟಗಿ ಸೇರುವಂತೆ ಮಾಡಿದ್ದಾರೆ.
ಸೈನಿಕರು ಕೆಂಚಪ್ಪ ವಡ್ಡರ ಅವರ ವಾರಸುದಾರರ
ಹುಡುಕಾಟಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು,ಈ ಘಟನೆಯನ್ನು ಪಬ್ಲಿಕ್ ನೆಕ್ಸ್ಟ್ ಕಲಘಟಗಿ ತಾಲೂಕಿನ ವ್ಯಕ್ಯಿ ಇಪ್ಪತ್ತೊಂದು ವರ್ಷಗಳಿಂದ ಉತ್ತರಕಾಂಡದಲ್ಲಿ:ವಾರಸುದಾರ ಹುಡುಕಾಟ ಎಂಬ ಸವಿವರವಾದ ವರದಿಯನ್ನು ಇದೇ ಪ್ರೆಭ್ರುವರಿ 10 ರಂದು ಪ್ರಸಾರ ಮಾಡಿತ್ತು.
ವರದಿ ಗಮನಿಸಿದ ಕುಟುಂಬದವರು ಕೆಂಚೆಪ್ಪನನ್ನು ಮರಳಿ ಗೂಡಿಗೆ ಕರೆದುಕೊಂಡು ಬಂದಿದ್ದು,ಪಬ್ಲಿಕ್ ನೆಕ್ಸ್ಟ್ ಹಾಗೂ ಸೈನಿಕರಿಗೆ ಧನ್ಯವಾದ ತಿಳಿಸಿದರು.ಇದು ಪಬ್ಲಿಕ್ ನೆಕ್ಸ್ಟ್ ವರದಿಯ ಇಂಪ್ಯಾಕ್ಟ್.
Kshetra Samachara
25/02/2021 03:16 pm